HomeLatest NewsBREAKING : ಬೆಂಗಳೂರಿನಲ್ಲಿ ನಿಷೇಧದ ನಡುವೆ 'ಬೈಕ್ ಟ್ಯಾಕ್ಸಿ' ಸಂಚಾರ : 103 ಸವಾರರಿಗೆ...

BREAKING : ಬೆಂಗಳೂರಿನಲ್ಲಿ ನಿಷೇಧದ ನಡುವೆ ‘ಬೈಕ್ ಟ್ಯಾಕ್ಸಿ’ ಸಂಚಾರ : 103 ಸವಾರರಿಗೆ ತಲಾ 5000 ರೂ. ದಂಡ.!

ಬೆಂಗಳೂರು : ನಿಷೇಧದ ನಡುವೆ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸಂಚರಿಸಿದ್ದು, 103 ಸವಾರರಿಗೆ ತಲಾ 5000 ದಂಡ ವಿಧಿಸಲಾಗಿದೆ. ಹೌದು. ‘ಬೈಕ್ ಟ್ಯಾಕ್ಸಿ’ ವಿರುದ್ಧ ಸಾರಿಗೆ ಇಲಾಖೆ ಸಮರ ನಡೆಸುತ್ತಿದ್ದು, ಬೆಂಗಳೂರಲ್ಲಿ ನಿನ್ನೆ ಒಂದೇ ದಿನ 103 ಬೈಕ್ ಟ್ಯಾಕ್ಸಿ ಸೀಜ್ ಮಾಡಲಾಗಿದೆ. 103 ಸವಾರರಿಗೆ ತಲಾ 5000 ದಂಡ ಹಾಕಲಾಗಿದೆ.

11 ಆರ್ ಟಿ ಒ ವ್ಯಾಪ್ತಿಯಲ್ಲಿ ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದ ಬೈಕ್ ಟ್ಯಾಕ್ಸಿಯನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಕೋರ್ಟ್ ಆದೇಶದ ಬಳಿಕವೂ ಬೈಕ್ ಟ್ಯಾಕ್ಸಿಗಳು ರಸ್ತೆಗಿಳಿಯುತ್ತಿದೆ. ಈ ಹಿನ್ನೆಲೆ ಆರ್ ಟಿ ಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸಂಚಾರ ನಡೆಸುತ್ತಿದ್ದ ಬೈಕ್ ಟ್ಯಾಕ್ಸಿ ಗಳನ್ನು ಸೀಜ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ RTO ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಿನ್ನೆ ನಗರದ ಹಲವೆಡೆ ಕಡೆ ಬೈಕ್ ಟ್ಯಾಕ್ಸಿ ಸೀಜ್ ಮಾಡಿದ್ದಾರೆ.ರಾಜಾಜಿನಗರ, ಯಶವಂತಪುರ ಸೇರಿದಂತೆ ಹಲವು ಕಡೆ ನಿಷೇಧದ ನಡುವೆಯೂ ಬೈಕ್ ಟ್ಯಾಕ್ಸಿ ಸಂಚರಿಸಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ RTO ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಗರದ ಹಲವೆಡೆ ಕಡೆ ಬೈಕ್ ಟ್ಯಾಕ್ಸಿ ಸೀಜ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಓಲಾ, ಊಬರ್, ರ್ಯಾಪಿಡೋ ಬೈಕ್ ಟ್ಯಾಕ್ಸಿಗಳಿಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದ್ದು, ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಮಧ್ಯಂತರ ಅನುಮತಿ ನೀಡಲು ಹೈಕೋರ್ಟ್ ನಿರಾಕರಿಸಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ದ ಬೈಕ್ ಟ್ಯಾಕ್ಸಿ ನಿಷೇಧಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular