ಕೋಲಾರ : ಬಿಜೆಪಿಗರು ಒಂದೇ ಒಂದು ಮನೆ ಕೊಟ್ಟಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಚಿವ ಜಮೀರ್ ಅಹಮದ್ ಸವಾಲ್ ಹಾಕಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಬಿಜೆಪಿಗರು ಒಂದೇ ಒಂದು ಮನೆ ಕೊಟ್ಟಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವೆ. ಬಿಜೆಪಿಗರು ಮನೆ ಕೊಟ್ಟಿದ್ರೆ ಫ್ರೂವ್ ಮಾಡಲಿ, 44 ಸಾವಿರ ಮನೆ ರೆಡಿ ಇದೆ. ಕೊಡುವುದು ಮಾತ್ರ ಬಾಕಿ ಇದೆ . ಬಿಜೆಪಿಗರು ಒಂದೇ ಒಂದು ಮನೆ ಕೊಟ್ಟಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ, ಇದು ನನ್ನ ಓಪನ್ ಚಾಲೆಂಜ್ ಎಂದು ಸಚಿವ ಜಮೀರ್ ಅಹಮದ್ ಸವಾಲ್ ಹಾಕಿದ್ದಾರೆ.
ಕೋಲಾರ ನಗರದಲ್ಲಿ ಕೆಎಂಡಿಸಿ ಪರವಾಗಿ ಎರಡು ಸರಕುಗಳ ವಾಹನಗಳನ್ನು ಫಲಾನುಭವಿಗಳಿಗೆ ಸಚಿವರು ಹಸ್ತಾಂತರಿಸಿದರು. ಈ ವೇಳೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಜನಾಬ್ ನಸೀರ್ ಅಹ್ಮದ್ ಉಪಸ್ಥಿತರಿದ್ದರು.

