HomeLive NewsBIG NEWS: ವಿಚಾರಣಾಧೀನ ಕೈದಿ ಮೇಲೆ ಹಲ್ಲೆ: ಐವರ ವಿರುದ್ಧ FIR ದಾಖಲು

BIG NEWS: ವಿಚಾರಣಾಧೀನ ಕೈದಿ ಮೇಲೆ ಹಲ್ಲೆ: ಐವರ ವಿರುದ್ಧ FIR ದಾಖಲು

ಶಿವಮೊಗ್ಗ: ಶಿವಮೊಗ್ಗದ ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ಪ್ರಕರಣ ಸಂಬಂಧ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕಾರಾಗೃಹದ ಮುಖ್ಯ ಅಧೀಕ್ಷಕ ರಂಗನಾಥ್, ಜೈಲರ್ ಅನಿಲ್ ಕುಮಾರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ತುಂಗಾನಗರ ಠಾಣೆಯಲ್ಲಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಜೂನ್ 13ರಂದು ಮಧ್ಯರಾತ್ರಿ ವಿಚಾರ್ಣಾಧೀನ ಕೈದಿಯಾಗಿದ್ದ ಭದ್ರಾವತಿಯ ಕಿರಣ್ ನನ್ನು ಕಾರಾಗೃಹಕ್ಕೆ ಕರೆತಂದು, ಕಾವೇರಿ ವಿಭಾಗದ ಕೊಠಡಿ ಸಂಖ್ಯೆ 28ರಲ್ಲಿ ಇರಿಸಲಾಗಿತ್ತು. ಈ ವೇಳೆ ಪರಶುರಮ್ ಅಲಿಯಾಸ್ ಚಿಂಗಾರಿ, ಪ್ರದೀಪ್ ಅಲಿಯಾಸ್ ಮೊದಲಿಯಾರ್, ಅಪ್ಪು ನಾಯ್ಕ್ ಅಲಿಯಾಸ್ ಅಪ್ಪು, ಹನುಮಮ್ತ ನಾಯ್ಕ್ ಮತ್ತು ಶಬರೇಶ್ ಅಲಿಯಾಸ್ ಆಚಾರಿ ಎಂಬುವವರು ಕಿರಣ್ ನನ್ನು ಕುಮದ್ವತಿ ಬ್ಯಾರಕ್ 32ಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದರು. ಭದ್ರಾವತಿಯ ಅಜಿತ್ ಅಪ್ಪಾಜಿ ಎಂಬಾತ ಹಲ್ಲೆ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular