HomeLatest NewsBIG NEWS: ಹೋಟೆಲ್ ರೂಂ ನಲ್ಲಿ ಖೋಟಾ ನೋಟು ಪ್ರಿಂಟ್: ಯುವಕ ಅರೆಸ್ಟ್

BIG NEWS: ಹೋಟೆಲ್ ರೂಂ ನಲ್ಲಿ ಖೋಟಾ ನೋಟು ಪ್ರಿಂಟ್: ಯುವಕ ಅರೆಸ್ಟ್

ಬೆಂಗಳೂರು: ಹೋಟೆಲ್ ನಲ್ಲಿ ರೂಂ ಬಾಡಿಗೆ ಪಡೆದು ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಯುವಕನನ್ನು ಬೆಂಗಳೂರಿನ ಕಮರ್ಷಿಯಲ್ ಸ್ಟ್ರ‍ೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕ್ರಿಷ್ ಮಾಲಿ (23) ಬಂಧಿತ ಆರೋಪಿ. ಟಸ್ಕರ್ ಟೌನ್ ನಲ್ಲಿರುವ ಹೋಟೆಲ್ ನಲ್ಲಿ ರೂಂ ಬುಕ್ ಮಾಡಿ ತಂಗಿದ್ದ ಆರೋಪಿ ನಕಲಿ ನೋಟುಗಳನ್ನು ಪ್ರಿಂಟ್ ಮಾಡಿದ್ದ. ಜೂನ್ 1ರಂದು ರೂಂ ಬುಕ್ ಮಾಡಿದ್ದ ಆರೋಪಿ ಜೂನ್ 7 ರಂದು ಹೋಟೆಲ್ ನಿಂದ ತೆರಳಿದ್ದಾನೆ. ಹೋಟೆಲ್ ನಿಂದ ಚೆಕ್ ಔಟ್ ಮಾಡುವಾಗ ನಕಲಿ ನೋಟುಗಳ ಮೂಲಕ ಬಿಲ್ ಪಾವತಿಸಿ ತೆರಳಿದ್ದ.

ಅದೇ ದಿನ ಹೋಟೆಲ್ ನಿಂದ ಸಂಗ್ರಹಿಸಿದ್ದ ತ್ಯಾಜ್ಯದಲ್ಲಿ ಕೆಲ ಖೋಟಾ ನೋಟುಗಳು ಪತ್ತೆಯಾಗಿದ್ದವು. ಈ ಬಗ್ಗೆ ಪೌರಕರಮಿಕರೊಬ್ಬರು ಹೋಟೆಲ್ ಮ್ಯಾನೇಜರ್ ಗೆ ತಿಳಿಸಿದ್ದರು. ಹೋಟೆಲ್ ಮ್ಯಾನೇಜರ್ ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೂರು ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೂಂ ಬುಕ್ ಮಾಡುವಾಗ ಆರೋಪಿ ನೀಡಿದ್ದ ಆಧಾರ್ ವಿಳಾಸ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಟೆಕ್ಸ್ ಟೈಲ್ಸ್ ಉದ್ಯಮಿಯೊಬ್ಬರ ಮಗನಾಗಿದ್ದು, ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಮನೆಯಿಂದ ಹೊರಬಂದಿದ್ದ. ಹೀಗೆ ಬಂದವನು ತನ್ನ ಬಳಿ ಇರುವ ಹಣ ಸಾಲಲ್ಲವೆಂದು ಖೋಟಾ ನೋಟು ಪ್ರಿಂಟ್ ಮಾಡಲಾರಂಭಿಸಿದ್ದ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular