HomeLatest NewsBREAKING : ಜಮೀನು ವಿವಾದಕ್ಕೆ ಯುವಕನ ಬರ್ಬರ ಹತ್ಯೆ: ಮಗನ ಕೊಲೆ ಕಣ್ಣಾರೆ ಕಂಡ ತಾಯಿ...

BREAKING : ಜಮೀನು ವಿವಾದಕ್ಕೆ ಯುವಕನ ಬರ್ಬರ ಹತ್ಯೆ: ಮಗನ ಕೊಲೆ ಕಣ್ಣಾರೆ ಕಂಡ ತಾಯಿ ಹೃದಯಾಘಾತದಿಂದ ಸಾವು.!

ಚಿಕ್ಕಬಳ್ಳಾಪುರ: ಜಮೀನು ವಿವಾದ ವಿಚಾರವಾಗಿ ಯುವಕನನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿದ್ದು, ಮಗನ ಕೊಲೆಯನ್ನು ಕಣ್ಣಾರೆ ಕಂಡ ತಾಯಿ ಆಘಾತಕ್ಕೊಳಗಾಗಿ ಹೃದಯಾಘತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಇಲ್ಲಿನ ಕೊರೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ನವೀನ್ ಕೊಲೆಯಾದ ಯುವಕ. ಮಗ ನವೀನ್ ಕೊಲೆಯನ್ನು ಕಂಡ ತಾಯಿ ಯಶೋದಮ್ಮ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಕೊಲೆ ಆರೋಪಿ ಶಿವಣ್ಣ ಅಲಿಯಾಸ್ ಶಿವಶಂಕರ ರೆಡ್ಡಿ ಪರಾರುಯಾಗಿದ್ದ.

ಪ್ರಕರಣ ದಾಖಲಿಸಿಕೊಂಡಿದ್ದ ಪೇರಸಂದ್ರ ಠಾಣೆ ಪೊಲೀಸರು ಆರೋಪಿ ಶಿವಣ್ಣ ಅಲಿಯಾಸ್ ಶಿವಶಂಕರ ರೆಡ್ಡಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular