HomeLatest Newsಯುವತಿಯರನ್ನು ದಾರಿ ತಪ್ಪಿಸುವ ಜಾಲ ಬಯಲಿಗೆಳೆದ ಯುವಕ ಆಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣು!

ಯುವತಿಯರನ್ನು ದಾರಿ ತಪ್ಪಿಸುವ ಜಾಲ ಬಯಲಿಗೆಳೆದ ಯುವಕ ಆಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣು!

ಕಾರವಾರ: ಯುವತಿಯರನ್ನು ದಾರಿ ತಪ್ಪಿಸುತ್ತಿದ್ದ ಗ್ಯಾಂಗ್ ಬಗ್ಗೆ ಬಯಲಿಗೆಳೆದಿದ್ದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ.

ಸಂತೋಷ ಗಣಪತಿ ನಾಯ್ಕ್ (29) ಆತ್ಮಹತ್ಯೆಗೆ ಶರಣಾಗಿರುವ ಯುವಕ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬೆನ್ನೂರು ಚಿಕ್ಕತೌಡತ್ತಿ ನಿವಾಸಿಯಾಗಿರುವ ಸಂತೋಷ್, ಸಿದ್ದಾಪುರದ ಕಾನೇಹಳ್ಲಿ ಬಳಿಯ ದೂಪದಕಾನು ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಾವಿಗೂ ಮುನ್ನ ಸಂತೋಷ್ ಕೆಲ ಆಡಿಯೋ, ಎಡಿಟೆಡ್ ಫೋಟೋಗಳನ್ನು ರೆಕಾರ್ಡ್ ಮಾಡಿಟ್ಟಿದ್ದಾನೆ. ಇದರಲ್ಲಿ ಯುವತಿಯರನ್ನು ಮಿಸ್ ಯೂಸ್ ಮಾಡಿಕೊಳ್ಳುವ ಜಾಲವೊಂದಿದೆ. ಆ ಜಾಲ ಯಾವ ರೀತಿ ಯುವತಿಯರನ್ನು ಬಲೆಗೆ ಕೆಡವಿ ಮಿಸ್ ಯೂಸ್ ಮಾಡಿಕೊಳ್ಳುತ್ತಿದೆ ಎಂಬುದನ್ನು ವಿವರಿಸಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಅಲ್ಲದೇ ಈ ಜಾಲಕ್ಕೆ ತಾನು ಪ್ರೀತಿಸಿದ ಯುವತಿಯೂ ಬಿದ್ದಿದ್ದು, ಆ ಜಾಲಕ್ಕೆ ಸಾಥ್ ನೀಡುತ್ತಿದ್ದಾಳೆ. ಆಕೆಯನ್ನು ಆ ಜಾಲದಿಂದ ಹೊರ ತರಲು ಸಾಕಷ್ಟು ಪ್ರಯತ್ನ ಪಟ್ಟು ತಾನು ಸೋತಿದ್ದಾಗಿ ತಿಳಿಸಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವತಿಯರನ್ನು ತಪ್ಪು ದಾರಿಗೆ ಎಳೆಯುವ ಜಾಲದ ಬಗ್ಗೆ ತಾನು ಬಹಿರಂಗ ಪಡಿಸಿದ್ದಕ್ಕೆ ಸಿದ್ದಾಪುರದ ಚರಣ್, ಲೋಕೇಶ್, ಮನೋಜ್ ಹಾಗೂ ಇತರ ನಾಲ್ವರು ನನ್ನ ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ. ತಾನು ಪ್ರೀತಿಸಿದ ಹುಡುಗಿಯನ್ನು ಈ ಜಾಲದಿಂದ ರಕ್ಷಿಸಲು ಸಾಕಷ್ಟು ಯತ್ನಿಸಿದೆ. ಆದರೆ ಆಕೆಯೇ ಆ ಜಾಲಕ್ಕೆ ಬೆಂಬಲವಾಗಿ ನಿಂತಿದ್ದಾಳೆ. ಇನ್ನು ನನಗೇನು ಬೇಡ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆಡಿಯೋ ಮಾಡಿಟ್ತು ಯುವಕ ಸಾವಿಗೆ ಶರಣಾಗಿದ್ದಾನೆ.

ಮೃತ ಸಂತೋಶ್ ತಂದೆ ಗಣಪತಿ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular