HomeLatest Newsರಾಜ್ಯದಲ್ಲಿ 4 ತಿಂಗಳುಗಳಲ್ಲಿ 979 ಬಾಲಕಿಯರ ಮೇಲೆ ಅತ್ಯಾಚಾರ: ಆಘಾತಕಾರಿ ಮಾಹಿತಿ ಬಯಲು: ಇಡೀ ಕರ್ನಾಟಕವೇ...

ರಾಜ್ಯದಲ್ಲಿ 4 ತಿಂಗಳುಗಳಲ್ಲಿ 979 ಬಾಲಕಿಯರ ಮೇಲೆ ಅತ್ಯಾಚಾರ: ಆಘಾತಕಾರಿ ಮಾಹಿತಿ ಬಯಲು: ಇಡೀ ಕರ್ನಾಟಕವೇ ತಲೆ ತಗ್ಗಿಸುವ ಸಂಗತಿ: ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂಬುದಕ್ಕೆ ಯಾವುದೇ ಕುರುಹುಗಳೂ ಇಲ್ಲದಂತೆ ಆಡಳಿತ ನಡೆಸುತ್ತಿದೆ ಕಾಂಗ್ರೆಸ್‌ ಸರ್ಕಾರ ಎಂದು ವಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಮಹಿಳೆಯರು, ಹೆಣ್ಣುಮಕ್ಕಳು ನಿರ್ಭೀತಿಯಿಂದ ಓಡಾಡುವುದಕ್ಕೆ ಯಾವ ʼಗ್ಯಾರಂಟಿʼಯೂ ಇಲ್ಲವಾಗಿದೆ. ಕಳೆದ ನಾಲ್ಕು ತಿಂಗಳುಗಳಲ್ಲಿ 979 ಬಾಲಕಿಯರ ಮೇಲೆ ಅತ್ಯಾಚಾರ ವರದಿ ದಾಖಲಾಗಿರುವುದು ಇಡೀ ಕರ್ನಾಟಕವೇ ತಲೆ ತಗ್ಗಿಸುವ ಸಂಗತಿ. ಬೆಂಗಳೂರಿನಲ್ಲಿಯೇ ಅತಿಹೆಚ್ಚು 114 ಪ್ರಕರಣಗಳು ದಾಖಲಾಗಿವೆ. ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಬಹಿರಂಗವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಕಸ್ಮಿಕ ಗೃಹಸಚಿವ ಡಾ.ಜಿ.ಪರಮೇಶ್ವರ ಅವರೇ ನಿಮ್ಮಿಂದ ಗೃಹಖಾತೆ ನಿರ್ವಹಿಸಲು ಜಪ್ಪಯ್ಯ ಅಂದರೂ ಸಾಧ್ಯವಿಲ್ಲ, ಮೊದಲು ರಾಜೀನಾಮೆ ಕೊಟ್ಟು ರಾಜ್ಯದ ಹೆಣ್ಣುಮಕ್ಕಳ ಮಾನ ಪ್ರಾಣ ಉಳಿಸಿ ಎಂದು ಆಗ್ರಹಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular