ವಿಶ್ವದ ಅತ್ಯಂತ ಸುರಕ್ಷಿತ ಮತ್ತು ಶಾಂತಿಯುತ ರಾಷ್ಟ್ರಗಳಲ್ಲಿ ಒಂದೆಂದು ಪರಿಗಣಿಸಲಾದ ಆಸ್ಟ್ರಿಯಾದಲ್ಲಿ ಆಘಾತಕಾರಿ ಘಟನೆ ನಡೆದಿದೆ.
ಜೂನ್ 10 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ, 21 ವರ್ಷದ ವ್ಯಕ್ತಿಯೊಬ್ಬ ವಿಯೆನ್ನಾದಿಂದ ದಕ್ಷಿಣಕ್ಕೆ 200 ಕಿಲೋಮೀಟರ್ ದೂರದಲ್ಲಿರುವ ಆಸ್ಟ್ರಿಯಾದ ಎರಡನೇ ಅತಿದೊಡ್ಡ ನಗರವಾದ ಗ್ರಾಜ್ನಲ್ಲಿರುವ ತನ್ನ ಹಿಂದಿನ ಪ್ರೌಢಶಾಲೆಗೆ ಪ್ರವೇಶಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಗುಂಡು ಹಾರಿಸಿದ್ದಾನೆ.
ಭೀಕರ ಗುಂಡಿನ ದಾಳಿಯಲ್ಲಿ 7 ಮಕ್ಕಳು ಸೇರಿ 10 ಮಂದಿ ಸಾವನ್ನಪ್ಪಿದ್ದಾರೆ. ನಂತರ ಆತ ಮುಖ್ಯ ರೈಲು ನಿಲ್ದಾಣದಿಂದ ಕೆಲವು ನೂರು ಮೀಟರ್ ಹಿಂದೆ ಇರುವ ಶಾಲೆಯ ಶೌಚಾಲಯದಲ್ಲಿ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

