HomeLatest NewsBIG NEWS: ಹನಿಮೂನ್ ಗೆ ತೆರಳಿದ್ದ ದಂಪತಿ ನಾಪತ್ತೆ ಪ್ರಕರಣ: ಜಲಪಾತದ ಕಣಿವೆಯಲ್ಲಿ ಪತಿ ಶವವಾಗಿ...

BIG NEWS: ಹನಿಮೂನ್ ಗೆ ತೆರಳಿದ್ದ ದಂಪತಿ ನಾಪತ್ತೆ ಪ್ರಕರಣ: ಜಲಪಾತದ ಕಣಿವೆಯಲ್ಲಿ ಪತಿ ಶವವಾಗಿ ಪತ್ತೆ: ಪತ್ನಿ ಇನ್ನೂ ನಿಗೂಢ!

ಹನಿಮೂನ್ ಗೆಂದು ಮೆಘಾಲಯಕ್ಕೆ ಹೋಗಿದ್ದ ನವ ಜೋಡಿ ನಿಗೂಢ ನಾಅಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತಂಕಕಾರಿ ಬೆಳವಣಿಗೆಯೊಂದು ನಡೆದಿದೆ. ಪತಿಯ ಶವ ಕಮರಿಯಲ್ಲಿ ಪತ್ತೆಯಾಗಿದ್ದು, ಪತ್ನಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಮಧ್ಯಪ್ರದೇಶದ ಇಂಧೋರ್ ನ ರಾಜ ರಘುವಂಶಿ ಹಾಗೂ ಪತ್ನಿ ಸೋನಮ್ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹನಿಮೂನ್ ಗಾಗಿ ಮೆಘಾಲಯಕ್ಕೆ ತೆರಳಿದ್ದರು. ಇದ್ದಕ್ಕಿದ್ದಂತೆ ದಂಪತಿ ನಾಪತ್ತೆಯಾಗಿದ್ದರು. ಮೇ 21ರಂದು ಮೇಘಾಲಯ ರಾಜಧಾನಿ ಶಿಲ್ಲಾಂಗ್ ಅತಿಥಿಗೃಹದಲ್ಲಿ ತಂಗಿದ್ದವರು, ಮಾರನೆಯ ದಿನ ಬೆಳಿಗ್ಗೆ ಮೇ 22ರಂದು ಬೈಕ್ ಬಾಡಿಗೆ ಪಡೆದು ಚಿರಾಪುಂಜಿಯ ಸೋಹ್ರಾಗೆ ತೆರಳಿದ್ದಾರೆ. ಈ ವೇಳೆ ಎರಡು ಲಗೇಜ್ ಬ್ಯಾಗ್ ನ್ನು ತೆಗೆದುಕೊಂಡು ಹೋಗಿದ್ದರು. ಮೇ 25ರ ಒಳಗೆ ಹಿಂತಿರುಗುವುದಾಗಿ ಅತಿಥಿಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮುಲಾಖಿಯಾತ್ ಗ್ರಾಮದ ನೊಂಗ್ರಿಯಾಟ್ ನ ಹೋಂ ಸ್ಟೇನಲ್ಲಿ ತಂಗಿದ್ದರು. ಬಳಿಕ ಮೇ 24ರಂದು ಅವರು ಬಾಡಿಗೆ ಪಡೆದಿದ್ದ ಬೈಕ್ ಶಿಲ್ಲಾಂಗ್- ಸೊಹ್ರಾ ಮಾರ್ಗದಲ್ಲಿ ಕೆಫೆಯೊಂದರ ಬಳಿ ಪತ್ತೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೇ ದಂಪತಿ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಫೋನ್ ಕೂಡ ಸ್ವಿಚ್ಡ್ ಆಫ್ ಆಗಿತ್ತು. ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದು ಕುಟುಂಬಕ್ಕೂ ಆತಂಕ ತಂದಿತ್ತು. ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಮೆಘಾಲಯ ಸಿಎಂ ಅವರಿಗೆ ದಂಪತಿಯನ್ನು ಸುರಕ್ಷಿತವಾಗಿ ಪತ್ತೆ ಮಾಡುವಂತೆ ಮನವಿ ಮಾಡಿದ್ದರು. ಪೊಲೀಸರಿಂದ ಮೆಘಾಲಯದ ಪೂರ್ವ ಖ್ಗಾಸಿ ಹಿಲ್ಸ್ ಪ್ರದೇಶದಲ್ಲಿ ತೀವ್ರ ಶೋಧಕಾರ್ಯಾಚರಣೆಯೂ ನಡೆದಿತ್ತು. ಆದಾಗ್ಯೂ ದಂಪತಿಯ ಸುಳಿವು ಇರಲಿಲ್ಲ.

ಡ್ರೋಣ್ ಕಾರ್ಯಾಚರಣೆ, ಸ್ನಿಫರ್ ನಾಯಿಗಳನ್ನು ಬಳಸಿ ಶೋಧಕಾರ್ಯ ನಡೆಸಲಾಗುತ್ತಿದೆ. ಇದೀಗ ಸಾವ್ಡಾಂಗ್ ಜಲಪಾತದ ಕೆಳಗೆ ಕಮರಿನಲ್ಲಿ ಶವವೊಂದು ಡ್ರೋಣ್ ಕಾರ್ಯಾಚರಣೆ ವೇಳೆ ನಲ್ಲಿ ಪತ್ತೆಯಾಗಿದೆ. ಸದ್ಯ ಮೃತದೇಹ ಹೊರತ್ತೆಗೆಯಲಾಗಿದ್ದು, ಅದು ರಾಜ ರಘುವಂಶಿ ಮೃತದೇಹ ಎಂದು ಕುಟುಂಬದವರು ದೃಢಪಡಿಸಿದ್ದಾರೆ. ಆದರೆ ರಾಜಾ ರಘುವಂಶಿ ಪತ್ನಿ ಸೋನಮ್ ಮಾತ್ರ ಇನ್ನೂ ಪತ್ತೆಯಾಗಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular