ಉತ್ತರ ಪ್ರದೇಶದ ಮೀರುತ್‌ನಲ್ಲಿ ನಡೆದ ಘಟನೆಯೊಂದು ಸಾರ್ವಜನಿಕವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಗಂಡನ ಅಕ್ರಮ ಸಂಬಂಧವನ್ನು ಬಯಲಿಗೆಳೆದ ಪತ್ನಿ, ಆತನನ್ನು ಮತ್ತು ಆತನ ಪ್ರೇಯಸಿಯನ್ನು ಬಾಡಿಗೆ ಮನೆಯೊಳಗೆ ಹಿಡಿದು ಧರ್ಮದೇಟು ನೀಡಿದ್ದಾಳೆ. ಫೂಲ್‌ಬಾಗ್ ಕಾಲೋನಿಯಲ್ಲಿ ನಡೆದ ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಮಹಿಳೆಯು ತನ್ನ ಸಂಬಂಧಿಕರೊಂದಿಗೆ ತನ್ನ ಪತಿಯನ್ನು ಪತ್ತೆ ಹಚ್ಚಿದ್ದಳು. ಆತ ಕಳೆದ ಸುಮಾರು ಎರಡು ತಿಂಗಳಿಂದ ಬೇರೊಬ್ಬ ಮಹಿಳೆಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನೆಂದು ತಿಳಿದುಬಂದಿದೆ. ಮನೆಯೊಳಗೆ ನುಗ್ಗಿದ ಪತ್ನಿ, ಮೊದಲು ತನ್ನ ಗಂಡನಿಗೆ ತೀವ್ರವಾಗಿ ಥಳಿಸಿದ್ದು, ನಂತರ ಆಕೆಯ ಕೋಪವು ಪ್ರೇಯಸಿಯತ್ತ ತಿರುಗಿದೆ. ಪತ್ನಿ ಥಳಿಸುತ್ತಿದ್ದಾಗ ಪ್ರೇಯಸಿ ಆ ವ್ಯಕ್ತಿಯ ಹಿಂದೆ ಅಡಗಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಪತ್ನಿ ಸರಣಿ ಏಟುಗಳನ್ನು ಮತ್ತು ಗುದ್ದುಗಳನ್ನು ನೀಡುತ್ತಿರುವುದು ಸೆರೆಯಾಗಿದೆ.
यूपी : मेरठ में सायमा ने पति को गैर महिला संग रंगे हाथ पकड़ लिया। दोनों करीब 2 महीने से किराए का कमरा लेकर रह रहे थे। जानकारी लगी तो पत्नी भी वहां पहुंच गई। उसके बाद युद्ध हुआ… pic.twitter.com/qFGMCJdZ3o
— Sachin Gupta (@SachinGuptaUP) June 5, 2025