HomeLatest NewsBIG NEWS: ಮೂರು ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ: ಆರೋಪಿ ಎನ್ ಕೌಂಟರ್...

BIG NEWS: ಮೂರು ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ: ಆರೋಪಿ ಎನ್ ಕೌಂಟರ್ ಗೆ ಬಲಿ

ಲಖನೌ: ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಮೆಟ್ರೋ ಸೇತುವೆ ಕೆಳಗೆ ಬಿಸಾಕಿ ಹೋಗಿದ್ದ ಆರೋಪಿಯನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ.

ದೀಪಕ್ ವರ್ಮಾ (26) ಎನ್ ಕೌಂಟರ್ ಗೆ ಬಲಿಯಾದ ಆರೋಪಿ. ಆರೋಪಿ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಆಲಂಬಾಗ್ ಪೊಲೀಸರು ಘೋಷಿಸಿದ್ದರು.

ಆರೋಪಿ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಿದ್ದ ವೇಳೆ ಇಂದು ಬೆಳಿಗ್ಗೆ ಆಲಂಬಾಗ್ ಪ್ರದೇಶದಲ್ಲಿ ಆರೋಪಿ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ ಎಂದು ಕೇಂದ್ರ ವಲಯ ಉಪ ಪೊಲೀಸ್ ಆಯುಕ್ತ ಆಶಿಶ್ ಶ್ರೀವಾಸ್ತವ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೆಟ್ರೋ ನಿಲ್ದಾಣದ ಬಳಿ ವಾಸವಾಗಿದ್ದ ದಂಪತಿಯ ಮೂರು ವರ್ಷದ ಮಗುವನ್ನು ಕಿಡ್ನಾಪ್ ಮಾಡಿದ್ದ ಆರೋಪಿ, ಅತ್ಯಾಚಾರವೆಸಗಿ ಬಳಿಕ ಆಲಂಬಾಗ್ ಮೆಟ್ರೋ ಸೇತುವೆ ಬಳಿ ಎಸೆದು ಹೋಗಿದ್ದ. ಬಾಲಕಿ ಕಾಣದಿದ್ದಾಗ ಪೋಷಕರು ಹುಡುಕಾತ ನಡೆಸಿದಾಗ ಮೆಟ್ರೋ ಸೇತುವೆ ಬಳಿ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.

For Latest News Updates, Join Our Whatsapp Community🚩
RELATED ARTICLES

Most Popular