HomeLatest NewsBREAKING: ಪೊಲೀಸರು ದಾಳಿ ನಡೆಸುತ್ತಿದ್ದಂತೆ KSCA ಕಾರ್ಯದರ್ಶಿ, ಖಜಾಂಚಿ, ಆರ್ ಸಿಬಿ ಮುಖ್ಯಸ್ಥ ಸೇರಿ ಐವರು...

BREAKING: ಪೊಲೀಸರು ದಾಳಿ ನಡೆಸುತ್ತಿದ್ದಂತೆ KSCA ಕಾರ್ಯದರ್ಶಿ, ಖಜಾಂಚಿ, ಆರ್ ಸಿಬಿ ಮುಖ್ಯಸ್ಥ ಸೇರಿ ಐವರು ಎಸ್ಕೇಪ್!

ಬೆಂಗಳೂರು: ಕಾಲ್ತುಳಿತ ದುರಂತದಲ್ಲಿ ಆರ್ ಸಿಬಿಯ 11 ಅಭಿಮಾನಿಗಳು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಕೆ ಎಸ್ ಸಿಎ ಕಾರ್ಯದರ್ಶಿ, ಖಜಾಂಚಿ, ಇವೆಂಟ್ ಮ್ಯಾನೇಜ್ಮೆಂಟ್ ಮುಖ್ಯಸ್ಥರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಕೆ ಎಸ್ ಸಿಎ ಕಾರ್ಯದರ್ಶಿ ಶಂಕರ್ ಮನೆ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಶಂಕರ್ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಖಜಾಂಚಿ ಜಯರಾಮ್ ಮನೆ ಮೇಲೂ ಪೊಲೀಸರು ತಡ ರಾತ್ರಿ ದಾಳಿ ನಡೆಸಿದ್ದು, ಈ ವೇಳೆ ಜಯರಾಮ್ ಕೂಡ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿಎನ್ ಎ ಮುಖ್ಯಸ್ಥ ವೆಂಕಟ್ ವರ್ಧನ್ ಕೂಡ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ ಡಿಎನ್ ಎ ಹಣಕಾಸು ಮುಖ್ಯಸ್ಥ ಮಜೀದ್ ಮನೆ ಮೇಲೂ ಪೊಲೀಸರು ದಾಳಿ ನಡೆಸಿದ್ದು, ಅವರು ಕೂಡ ಎಸ್ಕೇಪ್ ಆಗಿದ್ದಾರೆ.

ಮತ್ತೊಂದೆಡೆ ಆರ್ ಸಿಬಿ ಮುಖ್ಯಸ್ಥ ರಾಜೇಶ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ರಾಜೇಶ್ ಕೂಡ ಮನೆಯಲ್ಲಿ ಇಲ್ಲ, ಅವರೂ ಕೂಡ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular