ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹೆಚ್ಚಿಗೆಯಾಗಿ (ಶೇ.86 ಅಧಿಕ) ಬಿತ್ತನೆ ಪೂರ್ವ ಸಿದ್ದತೆಗಳನ್ನು ಕೈಗೊಳ್ಳಲು ರೈತರಿಗೆ ಅನುಕೂಲಕವಾಗಿ ಪರಿಣಮಿಸಿದೆ. ಜಿಲ್ಲೆಯ ರೈತರು ಈಗಾಗಲೇ ಬಿತ್ತನೆಗಾಗಿ ಭೂಮಿ ಸಿದ್ಧತೆ ಮಾಡಿಕೊಂಡು ಬಿತ್ತನೆ ಬೀಜ, ರಸಗೊಬ್ಬರ ಮುಂತಾದ ಪರಿಕರಗsಳ ದಾಸ್ತಾನು ಮಾಡಿಕೊಂಡಿರುವುದು ಜಿಲ್ಲೆಯಾದ್ಯಂತ ಕಂಡು ಬಂದಿದೆ.
ಪ್ರಸಕ್ತ ಸನ್ನಿವೇಶದಲ್ಲಿ ರೈತರು ಮಣ್ಣಿನ ತೇವಾಂಶ ಗಮನದಲ್ಲಿಟ್ಟುಕೊಂಡು ಬಿತ್ತನೆಗೆ ಹದಬರಿತವಾಗಿದ್ದ ಸಂದರ್ಭದಲ್ಲಿ ಮಾತ್ರ ಬಿತ್ತನೆ ಕೈಗೊಳ್ಳಬೇಕಾಗಿದೆ.
ಒಣ ಮಣ್ಣಿನಲ್ಲಿ ಕಡಿಮೆ ತೇವಾಂಶವಿರುವ ಪ್ರದೆಶಗಳಲ್ಲಿ (ಅರಹಸಿಯಾಗುವ ಸಂದರ್ಭ) ರೈತರು ಬಿತ್ತನೆ ಕೈಗೊಳ್ಳದೇ ಸಮರ್ಪಕ ಮಳೆಗಾಗಿ ಕಾಯ್ದು ನಂತರ ಹಂಗಾಮಿಗೆ ಅನುಗುಣವಾಗಿ ಬಿತ್ತನೆ ಕೈಗೊಳ್ಳುವುದು ಸೂಕ್ತವೆಂದು ಪರಿಗಣಿಸಲಾಗಿದೆ. ಅದರಲ್ಲಿಯೂ ಸೋಯಾಬಿನ್ ಬೆಳೆಯ ಬೀಜವು ಅತೀ ಸೂಕ್ಷ್ಮವಾಗಿದ್ದು ಅಗತ್ಯವಾದ ಮಣ್ಣಿನ ತೇವಾಂಶ ಲಭ್ಯವಿರದ ಸಂದರ್ಭದಲ್ಲಿ ಸರಿಯಾಗಿ ಮೊಳಕೆಯೊಡೆಯದೆ ಸಸಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವ ಸಂಭವವಿದೆ. ಆದ್ದರಿಂದ ಹದಭರಿತ ಮಣ್ಣಿನಲ್ಲಿ ಬಿತ್ತನೆ ಕೈಗೊಂಡಲ್ಲಿ ಉತ್ತಮ ಬೆಳೆ ನಿರೀಕ್ಷಿಸಬಹುದಾಗಿದೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

