HomeLatest NewsBIG NEWS: ಇಂದಿನ ಕಣ್ಣೀರ ಬದಲು ನಿನ್ನೆ ವಿವೇಚನೆ ಇರಬೇಕಿತ್ತು: ಡಿಸಿಎಂ ಕಣ್ಣೀರಿಗೆ ವಿಜಯೇಂದ್ರ ಕಿಡಿ

BIG NEWS: ಇಂದಿನ ಕಣ್ಣೀರ ಬದಲು ನಿನ್ನೆ ವಿವೇಚನೆ ಇರಬೇಕಿತ್ತು: ಡಿಸಿಎಂ ಕಣ್ಣೀರಿಗೆ ವಿಜಯೇಂದ್ರ ಕಿಡಿ

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ್ದಾರೆ. ದುರಂತದ ಬಗ್ಗೆ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕಣ್ಣೀರುಡುತ್ತಿದ್ದಾರೆ. ಅದರ ಬದಲು ನಿನ್ನೆಯೇ ವಿವೇಚನೆ ಇರಬೇಕಿತ್ತಲ್ಲವೇ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಕಾಲ್ತುಳಿದಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಕೇಳಿದ ಬಳಿಕವೂ ನಿನ್ನೆ ಕಪ್ ಗೆ ಮುತ್ತಿಟ್ಟಿದ್ದಾರೆ. ಇಂದು ಕಣ್ಣೀರಿಡುತ್ತಿದ್ದಾರೆ. ಈಗ ಕಣ್ಣೀರು ಹಾಕುವ ಬದಲು ನಿನ್ನೆಯೇ ವಿವೇಚನೆ ಇರಬೇಕಿತ್ತಲ್ಲವೇ? ನಿಮ್ಮ ಬೇಜವಾಬ್ದಾರಿಯಿಂದಾಗಿ ದುರಂತ ಸಂಭವಿಸಿದೆ. ಈಗ ಯಾರು ಹೊಣೆ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular