ಬೆಂಗಳೂರು : ನಾವು ಪರಿಸರವನ್ನು ಉಳಿಸಿದರೆ, ಪರಿಸರ ನಮ್ಮನ್ನು ಉಳಿಸುತ್ತದೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ನಾಡಿನ ಜನತೆಗೆ ವಿಶ್ವ ಪರಿಸರ ದಿನದ ಶುಭಾಶಯ ಕೋರಿದ್ದಾರೆ.
“ನಾವು ಪರಿಸರವನ್ನು ಉಳಿಸಿದರೆ ಪರಿಸರ ನಮ್ಮನ್ನು ಉಳಿಸುತ್ತದೆ” ಎಂಬ ಸರಳ ಸತ್ಯವನ್ನು ವರ್ತಮಾನದಲ್ಲಿ ಅರ್ಥಮಾಡಿಕೊಂಡರೆ ಇಂದಿನ ಮತ್ತು ಮುಂದಿನ ತಲೆಮಾರಿನ ಭವಿಷ್ಯ ಸುರಕ್ಷಿತವಾಗಿ ಉಳಿಯಲಿದೆ.
ಪರಿಸರ ಕಾಳಜಿ ಈ ದಿನಕ್ಕೆ ಸೀಮಿತವಾಗದೆ ನಮ್ಮೆಲ್ಲರ ನಿತ್ಯ ಬದುಕಿನ ಭಾಗವಾಗಲಿ. ಸರ್ವರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

