HomeLatest NewsBIG NEWS : ಸಾರ್ವಜನಿಕರಿಂದ ಸ್ವೀಕರಿಸುವ ದೂರು/ಮನವಿಗಳ ವಿಲೇವಾರಿಗೆ ಕಾಲಮಿತಿ ನಿಗದಿ : ರಾಜ್ಯ ಸರ್ಕಾರದಿಂದ...

BIG NEWS : ಸಾರ್ವಜನಿಕರಿಂದ ಸ್ವೀಕರಿಸುವ ದೂರು/ಮನವಿಗಳ ವಿಲೇವಾರಿಗೆ ಕಾಲಮಿತಿ ನಿಗದಿ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಹಾಗೂ ಅಧೀನ ಸಂಸ್ಥೆಗಳ ಸೇವೆ ಮತ್ತು ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸ್ವೀಕೃತವಾಗುವ ದೂರು / ಮನವಿಗಳನ್ನು ತ್ವರಿತ/ಗುಣಾತ್ಮಕ ವಿಲೇವಾರಿಗೆ ಕಾಲಮಿತಿಯನ್ನು ನಿಗಧಿಪಡಿಸಿದೆ.

ಸಾರ್ವಜನಿಕ ಕುಂದುಕೊರತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ, ಏಕೀಕೃತ ಸಾರ್ವಜನಿಕ ದೂರು ನಿವಾರಣಾ ತಂತ್ರಾಂಶ (Integrated Public Grievances Redressal System) ಅನುಷ್ಠಾನಗೊಳಿಸಲಾಗಿದ್ದು, ಸದರಿ ಆದೇಶದಲ್ಲಿ ಸಾರ್ವಜನಿಕ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಸ್ವೀಕೃತವಾಗುವ ಮನವಿಗಳನ್ನು ವಿಲೇವಾರಿಗೊಳಿಸಲು ಮೂರು ಹಂತದಲ್ಲಿ ಅನುಷ್ಠಾನಾಧಿಕಾರಿಗಳನ್ನು ಈ. ಕೆಳಕಂಡಂತೆ ನೇಮಿಸಲಾಗಿದೆ. ಸದರಿ ಅನುಷ್ಠಾನಾಧಿಕಾರಿಗಳು ಸರ್ಕಾರವು ನಿಗಧಿಪಡಿಸಿರುವ ಅವಧಿಯೊಳಗೆ ದೂರು/ಮನವಿಗಳನ್ನು ವಿಲೇವಾರಿಗೊಳಿಸಲು ಆದೇಶಿಸಲಾಗಿದೆ.

ಕೇಂದ್ರ ಸರ್ಕಾರದ ಆದೇಶದಲ್ಲಿ, ಸಾರ್ವಜನಿಕ ಕುಂದುಕೊರತೆ/ದೂರುಗಳನ್ನು ವಿಲೇವಾರಿಗೊಳಿಸಲು 30 ದಿನಗಳ ಕಾಲಮಿತಿಯನ್ನು ನಿಗಧಿಗೊಳಿಸಿದ್ದು, ಕೇಂದ್ರ ಸರ್ಕಾರದ ನಿರ್ದೇಶನದಂತೆ, ಕರ್ನಾಟಕ ರಾಜ್ಯ ಸರ್ಕಾರವು ಸಾರ್ವಜನಿಕ ದೂರುಗಳ ನಿರ್ವಹಣೆಗೆ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ, 30 ದಿನಗಳ ಕಾಲಮಿತಿಯನ್ನು ಪಾಲನೆ ಮಾಡಲಾಗುತ್ತಿದೆ. ಮೇಲೆ ಓದಲಾದ ಕ್ರಮಾಂಕ (3)ರಲ್ಲಿನ ಕೇಂದ್ರ ಸರ್ಕಾರದ ಆದೇಶದಲ್ಲಿ CPGRAMSನಲ್ಲಿ ಸ್ವೀಕೃತವಾಗುವ ಸಾರ್ವಜನಿಕ ದೂರು/ಕುಂದುಕೊರತೆಗಳು ವಿಲೇವಾರಿಗೆ ಸಂಬಂಧಿಸಿದಂತೆ, 21 ದಿನಗಳ ಕಾಲಮಿತಿಯನ್ನು ನಿಗಧಿಗೊಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇಂದ್ರ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯನ್ವಯ ರಾಜ್ಯದ ವಿವಿಧ ಇಲಾಖೆಗಳು, ಅಧೀನ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ಮಂಡಳಿಗಳು, ಪ್ರಾಧಿಕಾರಗಳು, ಅನುದಾನಿತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಸಾರ್ವಜನಿಕ ಉದ್ದಿಮೆಗಳು ಸೇರಿದಂತೆ ಎಲ್ಲಾ ಸರ್ಕಾರಿ, ಸರ್ಕಾರಿ ಅನುದಾನಿತ ಹಾಗೂ ಅರೆಸರ್ಕಾರಿ ಸಂಸ್ಥೆಗಳಲ್ಲಿನ ಸೇವೆಗಳು ಹಾಗೂ ಯೋಜನೆಗಳಿಗೆ ಸಂಬಂಧಿಸಿದಂತೆ IPGRS ಹಾಗೂ CPGRAMSನಲ್ಲಿ ಸ್ವೀಕೃತವಾಗುವ ಸಾರ್ವಜನಿಕ ಕುಂದುಕೊರತೆಗಳನ್ನು ಹಾಗೂ ಮನವಿಗಳನ್ನು ತ್ವರಿತವಾಗಿ, ಗುಣಾತ್ಮಕವಾಗಿ ಹಾಗೂ ನಾಗರೀಕರಿಗೆ ತೃಪ್ತಿಕರವಾಗಿ ಆಯಾ ವಿಷಯಗಳ ಬಗೆಗಿನ ಕಾಯ್ದೆ, ನಿಯಮ ಹಾಗೂ ಸರ್ಕಾರಿ ಆದೇಶೆಗಳನುಸಾರ ಪರಿಣಾಮಕಾರಿಯಾಗಿ ವಿಲೇಗೊಳಿಸಲು ಈ ಕೆಳಕಂಡಂತೆ 21 ದಿನಗಳ ಕಾಲಮಿತಿಯನ್ನು ನಿಗದಿಗೊಳಿಸಿ ಆದೇಶಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular