HomeLive Newsಮಗಳ ಅಡ್ಮಿಷನ್ ಗಾಗಿ ಊರಿಗೆ ಹೋಗುತ್ತಿದ್ದಾಗ ಘೋರ ಘಟನೆ: ಜಿಯೋ ಕಂಪನಿ ಉದ್ಯೋಗಿಯ ಬರ್ಬರ ಹತ್ಯೆ

ಮಗಳ ಅಡ್ಮಿಷನ್ ಗಾಗಿ ಊರಿಗೆ ಹೋಗುತ್ತಿದ್ದಾಗ ಘೋರ ಘಟನೆ: ಜಿಯೋ ಕಂಪನಿ ಉದ್ಯೋಗಿಯ ಬರ್ಬರ ಹತ್ಯೆ

ಚಿತ್ರದುರ್ಗ: ಮಗಳ ಅಡ್ಮಿಷನ್ ಗಾಗಿ ಊರಿಗೆ ತೆರಳುತ್ತಿದ್ದ ಜಿಯೋ ಕಂಪನಿ ಉದ್ಯೋಗಿಯೊಬ್ಬನನ್ನು ಬರ್ಬರವಗೈ ಹತ್ಯೆ ಮಾಡಿರುವ ಘಟನೆ ಚಿತ್ರ ದುರ್ಗದ ರೈಲು ನಿಲ್ದಾಣ ಬಳಿಯ ನಿರ್ಜನ ಪ್ರದೇಶದಲ್ಲಿ ನಡೆದಿದೆ.

ಬಾಗಲಕೋಟೆ ಮೂಲದ ಇಳಕಲ್ ನ ಬಸವರಾಜ್ ಕೊಲೆಯಾದ ವ್ಯಕ್ತಿ. ಚಿತ್ರದುರ್ಗದಲ್ಲಿ ಬಸ್ ನಿಂದ ಇಳಿದು ಮದ್ಯಸೇವನೆ ಮಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಗಳಿಂದ ಬಸವರಾಜ್ ಕೊಲೆಯಾಗಿದ್ದಾನೆ.

ಕೊಲೆಯಾದ ಬಸವರಾಜ್ ಬೆಂಗಳೂರಿನಲ್ಲಿ ಜಿಯೋ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಬಸ್ ನಲ್ಲಿ ಇಳಕಲ್ ಗೆ ತೆರಳುತ್ತಿದ್ದ. ಈ ವೇಳೆ ಚಿತ್ರದುರ್ಗದ ಬಳಿ ಬಸ್ ಇಳಿದಿದ್ದಾಗ ಕೊಲೆಯಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಸವರಾಜ್ ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ. ಗಲಾಟೆ-ಜಗಳ ಮಾಡಿಕೊಂಡವನೂ ಅಲ್ಲ. ಆದರೆ ಕುಡಿತದ ಚಟ ಹೊಂದಿದ್ದ. ಊರಿಗೆ ಹೋಗುವಾಗ ಚಿತ್ರದುರ್ಗದ ಬಸ್ ನಿಲ್ದಾಣದಲ್ಲಿ ಇಳಿದು ಸಮೀಪವೇ ಇದ್ದ ಬಾರ್ ಗೆ ತೆರಳಿ ಮದ್ಯಸೆವಿಸುತ್ತಿದ್ದ. ಈ ವೇಳೆ ಆತನ ಬಳಿ ಇರುವ ಹಣ ಕಂಡು ದುಷ್ಕರ್ಮಿಗಳು ಆತನ ಬೆನ್ನು ಬಿದ್ದಿದ್ದಾರೆ. ಪುಸಲಾಯಿಸಿಕೊಂಡು ಬಂದು ರೈಲ್ವೆ ನಿಲ್ದಾಣದ ಬಳಿ ಕರೆತಂದು ಹತ್ಯೆ ಮಾಡಿ ಹಣ ದೋಚಿ ಪರಾರಿಯಾಗಿದ್ದಾರೆ.

ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯ್ ಹಾಗೂ ರಹಿಂ ಬಂಧಿತ ಆರೋಪಿಗಳು.

For Latest News Updates, Join Our Whatsapp Community🚩
RELATED ARTICLES

Most Popular