ನಾಯಿ ಮಾಡಿದ ಸಾಹಸ; ಹೊತ್ತಿ ಉರಿಯುವ ಮನೆಯಿಂದ ಕುಟುಂಬವನ್ನು ಪಾರುಮಾಡಿದ ಗೋಲ್ಡನ್ ರಿಟ್ರೈವರ್ ‘ಲುಲು’ !

ಸಾಕುಪ್ರಾಣಿಗಳು ಕೇವಲ ಮನರಂಜನೆಗಾಗಿ ಮಾತ್ರವಲ್ಲ, ಸಂದರ್ಭ ಬಂದಾಗ ಅವು ಜೀವ ರಕ್ಷಕಗಳಾಗಿ ನಿಲ್ಲಬಲ್ಲವು ಎಂಬುದಕ್ಕೆ ಇದೊಂದು ಜೀವಂತ ಉದಾಹರಣೆ. ಕ್ಯಾಲಿಫೋರ್ನಿಯಾದ ಬೆರ್ಕರ್ಸ್‌ಫೀಲ್ಡ್‌ನಲ್ಲಿ, ಗೋಲ್ಡನ್ ರಿಟ್ರೈವರ್ ತಳಿಯ ‘ಲುಲು’ ಎಂಬ ನಾಯಿಯ ಸಮಯಪ್ರಜ್ಞೆಯಿಂದಾಗಿ ಒಂದು ಕುಟುಂಬ ಬೆಂಕಿ ಅನಾಹುತದಿಂದ ಪಾರಾಗಿದೆ.

ಕಳೆದ ವಾರ, ಬೆರ್ಕರ್ಸ್‌ಫೀಲ್ಡ್ ಅಗ್ನಿಶಾಮಕ ದಳಕ್ಕೆ ಒಂದು ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ತುರ್ತು ಕರೆ ಬಂದಿತ್ತು. ಅಷ್ಟರಲ್ಲಾಗಲೇ ಮನೆಯಲ್ಲಿ ಬೆಂಕಿ ವ್ಯಾಪಿಸುತ್ತಿದ್ದರೂ, ಕುಟುಂಬದ ಸದಸ್ಯರು ನಿದ್ರೆಯಲ್ಲಿದ್ದರು. ಆದರೆ, ಚುರುಕಾದ ಲುಲು, ತನ್ನ ಸಹಜ ಪ್ರವೃತ್ತಿಗೆ ಓಗೊಟ್ಟು, ಅಗ್ನಿಶಾಮಕ ದಳ ಬರುವ ಮುನ್ನವೇ ತನ್ನ ಮಾಲೀಕರನ್ನು ಅಪಾಯದಿಂದ ಪಾರು ಮಾಡುವ ಕೆಲಸವನ್ನು ಕೈಗೆತ್ತಿಕೊಂಡಿತು.

ಬೆರ್ಕರ್ಸ್‌ಫೀಲ್ಡ್ ಅಗ್ನಿಶಾಮಕ ದಳದವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದಂತೆ, ಕಟ್ಟಡದ ಹೊರಭಾಗದಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿಯ ಜ್ವಾಲೆಗಳನ್ನು ಲುಲು ಗಮನಿಸಿತು. ತಕ್ಷಣವೇ ಕಾರ್ಯಪ್ರವೃತ್ತವಾದ ಇದು, ವೇಗವಾಗಿ ಕುಟುಂಬದ ಸದಸ್ಯರನ್ನು ಎಬ್ಬಿಸಿ, ಬೆಂಕಿಯ ಬಗ್ಗೆ ಎಚ್ಚರಿಸಿತು.

ಲುಲು ಮಾಡಿದ ಈ ಸಾಹಸದಿಂದಾಗಿ, ಮನೆಯಲ್ಲಿದ್ದವರೆಲ್ಲರೂ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಹೊರಬರಲು ಸಾಧ್ಯವಾಯಿತು. ಕೆಲವೇ ಕ್ಷಣಗಳಲ್ಲಿ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ, ಹಲವಾರು ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಈ ಅಗ್ನಿ ಅನಾಹುತದಿಂದ ಮನೆಗೆ ಗಣನೀಯ ಹಾನಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read