ಬೆಂಗಳೂರು : ಇಂದು ಆರ್’ಸಿಬಿ ಹಾಗೂ ಪಂಜಾಬ್ ನಡುವೆ ಫೈನಲ್ ನಡೆಯಲಿದೆ. ಅವಧಿಗೂ ಮೀರಿ ‘ಪಬ್’ ಓಪನ್ ಮಾಡಿದ್ರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಕಮಿಷನರ್ ಬಿ ದಯಾನಂದ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ನಗರದ ಕೋರಮಂಗಲ, ಎಂಜಿ ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ಹಲವು ಕಡೆ ಆರ್ ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಲು ಸಿದ್ದರಾಗಿದ್ದಾರೆ. ಈ ಹಿನ್ನೆಲೆ ಪೊಲೀಸರು ಕೂಡ ಎಚ್ಚರಿಕೆ ವಹಿಸಿದ್ದಾರೆ. ಮಳೆ ಬಂದು ಪಂದ್ಯ ಮುಗಿಯಲು ತಡವಾದರೆ ಪಬ್ ಗಳನ್ನು ಕಡ್ಡಾಯವಾಗಿ ನಿಗದಿತ ಸಮಯದಲ್ಲಿ ಬಂದ್ ಮಾಡಬೇಕು, ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಪೊಲೀಸರ ಸೂಚನೆ ಮೀರಿ ಅವಧಿ ಮುಗಿದರೂ ಪಬ್ ತೆರೆದರೆ ಎಫ್ ಐ ಆರ್(FIR) ದಾಖಲಿಸಲಾಗುತ್ತದೆ ಎಂದು ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

