HomeLatest Newsಪ್ರಧಾನಿ ಮೋದಿ ಸ್ವಯಂ ಪ್ರತಿಷ್ಠೆಯ ಭಾಷಣ ಮಾಡಬಾರದು : ಮಲ್ಲಿಕಾರ್ಜುನ ಖರ್ಗೆ

ಪ್ರಧಾನಿ ಮೋದಿ ಸ್ವಯಂ ಪ್ರತಿಷ್ಠೆಯ ಭಾಷಣ ಮಾಡಬಾರದು : ಮಲ್ಲಿಕಾರ್ಜುನ ಖರ್ಗೆ

ನವದೆಹಲಿ : ಪ್ರಧಾನಿ ಮೋದಿ ಸ್ವಯಂ ಪ್ರತಿಷ್ಠೆಯ ಭಾಷಣ ಮಾಡಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ದೇಶದ ವಿಚಾರದಲ್ಲಿ ಒಗ್ಗಟ್ಟು ಇರಬೇಕು. ನಾವು ಎಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಿರಬೇಕು. ದೇಶದ ಭದ್ರತೆ ವಿಚಾರದಲ್ಲಿ ಎಲ್ಲ ನಾಯಕರು ಬಾಯಿ ಮುಚ್ಚಿಕೊಂಡು ಇರಬೇಕು. ನಮ್ಮ ವಿರೋಧಿಗಳನ್ನು ಓಡಿಸುವ ಕೆಲಸ ಮಾಡಬೇಕು. ಏನು ಘಟನೆ ಆಗಿದೆಯೊ ಆ ಬಗ್ಗೆ ತಿಳಿದುಕೊಂಡು ಮಾತನಾಡುವುದು ಒಳ್ಳೆಯದು. ಭಾರತದ ವಾದವನ್ನು ಜಗತ್ತಿನ ಮುಂದೆ ಮಂಡಿಸಲು ತೆರಳಿರುವ ವಿವಿಧ ಪಕ್ಷಗಳ ಸದಸ್ಯರನ್ನು ಒಳಗೊಂಡ ಸಂಸದೀಯ ನಿಯೋಗದ ವರದಿಗಳು ಹೊರಬರುವ ಮೊದಲು, ನರೇಂದ್ರ ಮೋದಿಯವರು ಚುನಾವಣಾ ಭಾಷಣ ಮಾಡಬಾರದು. “ನಾನು ಅದನ್ನು ಮಾಡಿದ್ದೇನೆ, ಇದನ್ನು ಮಾಡಿದ್ದೇನೆ” ಎಂದು ಅವರು ಸ್ವಯಂ ಘೋಷಣೆ ಮಾಡಬಾರದು. ಇಡೀ ದೇಶ ನಮ್ಮ ಸೇನೆಯ ಹಿಂದೆ ಇದೆ. ಸೇನೆಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದೇನೆ ಎಂದು ಮೋದಿ ಈ ಹಿಂದೆ ಹೇಳಿದ್ದರು. ಮತ್ತೆ ಈಗ ಯಾಕೆ ಮಾತನಾಡುತ್ತಿದ್ದಾರೆ? ಅವರು ಸ್ವಯಂ ಪ್ರತಿಷ್ಠೆಯ ಭಾಷಣ ಮಾಡಬಾರದು. ಸಂಸತ್ ಅಧಿವೇಶನ ಕರೆದು ಚರ್ಚೆ ಮಾಡೋಣವೆಂದು ಹೇಳಿ ದ್ದೇವೆ. ಪಾಕಿಸ್ತಾನ ಕೂಡ ಸಂಸತ್ ಅಧಿವೇಶನ ಕರೆದು ಚರ್ಚೆ ನಡೆಸಿದೆ. ನಾವು ಯಾರೂ ದೇಶದ ವಿರುದ್ಧ ಮಾತನಾಡುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular