HomeLatest NewsBIG NEWS: ಯುವತಿ ಮೇಲೆ ಬಸ್ ಹತ್ತಿಲು ಯತ್ನ: BMTC ಬಸ್ ಚಾಲಕ ಸಸ್ಪೆಂಡ್

BIG NEWS: ಯುವತಿ ಮೇಲೆ ಬಸ್ ಹತ್ತಿಲು ಯತ್ನ: BMTC ಬಸ್ ಚಾಲಕ ಸಸ್ಪೆಂಡ್

ಬೆಂಗಳೂರು: ಯುವತಿ ಮೇಲೆ ಬಸ್ ಹತ್ತಿಸಲು ಯತ್ನಿಸಿದ್ದ ಬಿಎಂಟಿಸಿ ಬಸ್ ಚಾಲಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಪ್ರಶಾಂತ್ ಅಮಾನತುಗೊಂಡಿರುವ ಬಸ್ ಚಾಲಕ. ಬಿಎಂಟಿಸಿ ಬಸ್ ಪಕ್ಕ ಕಾರಿನಲ್ಲಿದ್ದ ಯುವತಿ ಕಾರಿನಿಂದ ಇಳಿದು ಬಸ್ ಚಾಲಕನನ್ನು ಪ್ರಶ್ನಿಸಿದ್ದಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಬಳಿಕ ಬಸ್ ನ್ನು ಅಡ್ಡಗಟ್ಟಿದ ಯುವತಿ ಮೇಲೆ ಬಸ್ ಚಾಲಕ ಬಸ್ ಹತ್ತಿಸಲು ಯತ್ನಿಸಿದ್ದಾನೆ. ಅದೃಷ್ಟವಶಾತ್ ಯುವತಿ ಬಚಾವ್ ಆಗಿದ್ದಾಳೆ.

ಈ ಘಟನೆಯನ್ನು ಕಂಡ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಚಂದ್ರಾಲೇಔಟ್ ಡಿಪೋಗೆ ಸೇರಿದ ಬಸ್ ಇದಾಗಿದೆ. ಮೇ 25ರಂದು ನಡೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಿಎಂಟಿಸಿ ಬಸ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು. ಇದೀಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ಮೇರೆಗೆ ಬಸ್ ಚಾಲಕನ್ನು ಅಮಾನತು ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular