HomeLatest Newsಶಾಲಾ ಕೊಠಡಿ ಕೇಳಿದ ಶಿಕ್ಷಕನ ಅಮಾನತಿಗೆ ಭಾರೀ ಆಕ್ರೋಶ: ಆದೇಶ ಹಿಂಪಡೆಯಲು ಸಿಎಂಗೆ ಸಾಹಿತಿಗಳ ಪತ್ರ

ಶಾಲಾ ಕೊಠಡಿ ಕೇಳಿದ ಶಿಕ್ಷಕನ ಅಮಾನತಿಗೆ ಭಾರೀ ಆಕ್ರೋಶ: ಆದೇಶ ಹಿಂಪಡೆಯಲು ಸಿಎಂಗೆ ಸಾಹಿತಿಗಳ ಪತ್ರ

ಬೆಂಗಳೂರು: ಶಾಲಾ ಕೊಠಡಿ ಮಂಜೂರಾತಿಗೆ ಪ್ರತಿಭಟನೆ ನಡೆಸಿದ ಬೆಳಗಾವಿ ಜಿಲ್ಲೆ ನಿಡಗುಂದಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ವೀರಣ್ಣ ಅವರನ್ನು ಅಮಾನತು ಮಾಡಿರುವ ಶಿಕ್ಷಣ ಇಲಾಖೆ ನಡೆಗೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಸರ್ಕಾರ ಕೂಡಲೇ ಅಮಾನತು ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಲಾಗಿದೆ. ಸಾಹಿತಿಗಳಾದ ಡಾ. ಕೆ. ಮರುಳಸಿದ್ದಪ್ಪ, ಎಸ್.ಜಿ. ಸಿದ್ದರಾಮಯ್ಯ, ಡಾ. ವಸುಂಧರಾ ಭೂಪತಿ, ಮಾವಳ್ಳಿ ಶಂಕರ್ ಸೇರಿದಂತೆ ನಾಡಿನ ಸಾಹಿತಿಗಳು, ಶಿಕ್ಷಣ ತಜ್ಞರು, ಲೇಖಕರು, ಹೋರಾಟಗಾರರು, ಖಾಸಗಿ ಶಾಲಾ ಸಂಘಟನೆಗಳು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದು ಶಿಕ್ಷಕ ವೀರಣ್ಣರ ಅಮಾನತು ಕ್ರಮವನ್ನು ಖಂಡಿಸಿದ್ದು, ಅಮಾನತು ಆದೇಶ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಶಾಲೆಯ ಶಿಕ್ಷಕ ವೀರಣ್ಣ ಅವರು ಶಾಲಾ ಕೊಠಡಿಗಳ ಮಂಜೂರಾತಿಗೆ ನಡೆಸಿದ ಪ್ರತಿಭಟನೆ ಅವರ ಶಾಲೆಯ ಸಮಸ್ಯೆಯಷ್ಟೇ ಅಲ್ಲ. ಲಕ್ಷಾಂತರ ನಿಷ್ಠಾವಂತ ಶಿಕ್ಷಕರ ಧ್ವನಿಯಾಗಿದೆ. ಶಿಕ್ಷಕರ ಸಂಘದ ನಾಯಕರು ಕೂಡ ಅನೇಕ ಸಲ ಇದೇ ವಿಷಯದ ಬಗ್ಗೆ ಧ್ವನಿಯೆತ್ತಿದ್ದಾರೆ. ಆದರೆ ಬಹುಪಾಲು ಶಿಕ್ಷಕರು ನೀತಿ ಸಂಹಿತೆ, ಶಿಸ್ತು ಕ್ರಮದ ಭೀತಿಯಿಂದ ಸುಮ್ಮನಾಗಿದ್ದಾರೆ. ಅಮಾನತುಗೊಂಡ ಶಿಕ್ಷಕನ ವಿರುದ್ಧ ಕ್ರಮವನ್ನು ಪುನರ್ ಪರಿಶೀಲಿಸಿ ಗೌರವ ಪೂರ್ವಕವಾಗಿ ಮರಳಿ ಸೇವೆಗೆ ಕರೆ ತರಬೇಕು ಎಂದು ಮನವಿ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular