HomeKarnatakaBIG NEWS : ಬೆಂಗಳೂರಲ್ಲಿ ಮದುವೆ ಆಗುವುದಾಗಿ ನಂಬಿಸಿ ಸ್ನೇಹಿತೆಗೆ ಲೈಂಗಿಕ ಕಿರುಕುಳ : ಕಾನ್ಸ್'ಟೇಬಲ್...

BIG NEWS : ಬೆಂಗಳೂರಲ್ಲಿ ಮದುವೆ ಆಗುವುದಾಗಿ ನಂಬಿಸಿ ಸ್ನೇಹಿತೆಗೆ ಲೈಂಗಿಕ ಕಿರುಕುಳ : ಕಾನ್ಸ್’ಟೇಬಲ್ ವಿರುದ್ಧ ‘FIR’ ದಾಖಲು

ಬೆಂಗಳೂರು : ಮದುವೆ ಆಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬಳಸಿ ಮಹಿಳಾ ಕಾನ್ಸ್ಟೇಬಲ್ ಗೆ ವಂಚಿಸಿದ ಆರೋಪದ ಮೇರೆಗೆ ಕೇಂದ್ರ ಸಶಸ್ತ್ರ ಮೀಸಲು ಪಡೆಯ ಕಾನ್ಸ್ಟೇಬಲ್ ವಿರುದ್ಧ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಕುರಿತು ವಿಚಾರಣೆಗೆ ಹಾಜರಾಗಲು ಆರೋಪಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಯಾದಗಿರಿ ಜಿಲ್ಲೆಯ ಸಂಜೀವ್ ಚವಾಣ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಸ್ನೇಹಿತೆ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.

ಸಂತ್ರಸ್ತ ಮಹಿಳಾ ಕಾನ್ಸ್ಟೇಬಲ್ ಹಾಗೂ ಸಿಆರ್ಎಫ್ನ ಕಾನ್ಸ್ಟೇಬಲ್ ಸಂಜೀವ್ ಅವರು ಯಾದಗಿರಿ ಜಿಲ್ಲೆಯವರಾಗಿದ್ದು, ಕೆಲವು ದಿನಗಳಿಂದ ಪರಸ್ಪರ ಪರಿಚಯವಾಗಿದ್ದರು. ನಂತರ ಸ್ನೇಹಿ ಪ್ರೀತಿಗೆ ತಿರುಗಿದ್ದು, ಒಬ್ಬರನ್ನೊಬ್ಬರು ಲವ್ ಮಾಡುತ್ತಿದ್ದರು. ಆಗ ಸಂಜೀವ್ ಮಹಿಳಾ ಕಾನ್ಸ್ಟೇಬಲ್ ಜೊತೆ ಲೈಂಗಿಕ ಸಂರ್ಪಕ ಬೆಳೆಸಿದ್ದಾನೆ. ನಂತರ ಮದುವೆಗೆ ಹಿಂದೇಟು ಹಾಕಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದನ್ನು ಸಂತ್ರಸ್ತೆ ಪ್ರಶ್ನಿಸಿದಾಗ ಖಾಸಗಿ ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟು ಕಿರುಕುಳ ನೀಡಿದ್ದ. ಇದರಿಂದ ಬೇಸತ್ತ ಸಂತ್ರಸ್ತೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular