HomeLatest NewsBIG NEWS: ಅಧಿಕಾರ ವಿಕೇಂದ್ರೀಕರಣ, ತೆರಿಗೆ ಸಂಗ್ರಹ, ಅನುದಾನ ಬಳಕೆಯಲ್ಲಿ ರಾಜ್ಯಕ್ಕೆ ಅಗ್ರಸ್ಥಾನ: ಕೇಂದ್ರ ಸರ್ಕಾರ...

BIG NEWS: ಅಧಿಕಾರ ವಿಕೇಂದ್ರೀಕರಣ, ತೆರಿಗೆ ಸಂಗ್ರಹ, ಅನುದಾನ ಬಳಕೆಯಲ್ಲಿ ರಾಜ್ಯಕ್ಕೆ ಅಗ್ರಸ್ಥಾನ: ಕೇಂದ್ರ ಸರ್ಕಾರ ಶ್ಲಾಘನೆ

ಗ್ರಾಮೀಣಾಭಿವೃದ್ಧಿ ಇಲಾಖೆ ರಾಜ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಅಧಿಕಾರ ವಿಕೇಂದ್ರೀಕರಣ, ತೆರಿಗೆ ಸಂಗ್ರಹ, ಅನುದಾನ ಬಳಕೆ, ಗ್ರಾಮಸಭೆ ಲೆಕ್ಕ ಪರಿಶೋಧನೆಯಲ್ಲಿ ಮುಂಚೂಣಿಯಲ್ಲಿದೆ.

ಪಂಚಾಯತ್‌ ವಿಕೇಂದ್ರೀಕರಣ ಕುರಿತು ದೇಶದ ಎಲ್ಲ ರಾಜ್ಯಗಳಲ್ಲಿ ನಡೆಸಿರುವ ಅಧ್ಯಯನ ವರದಿಯನ್ನು ಕೇಂದ್ರದ ಪಂಚಾಯತ್‌ ರಾಜ್‌ ಸಚಿವಾಲಯ ಬಿಡುಗಡೆಗೊಳಿಸಿದ್ದು, ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ.

ಪಂಚಾಯತ್‌ ಸಬಲೀಕರಣ, ಆರ್ಥಿಕ ಸ್ವಾಯತ್ತತೆ ಮತ್ತು ಆಡಳಿತ ಸುಧಾರಣೆಗಳ ಕುರಿತು ರಾಜ್ಯಗಳನ್ನು ಮೌಲ್ಯಮಾಪನ ಮಾಡುವ ಪಿಡಿಐ ಚೌಕಟ್ಟು, ಕಾರ್ಯಗಳು, ಹಣಕಾಸು, ಕಾರ್ಯನಿರ್ವಾಹಕರು, ಸಾಮರ್ಥ್ಯ ವೃದ್ಧಿ ಮತ್ತು ಹೊಣೆಗಾರಿಕೆ ಸೇರಿ ಆರು ಪ್ರಮುಖ ನಿಯತಾಂಕಗಳನ್ನು ಆಧರಿಸಿ ಮೌಲ್ಯಮಾಪನ ಮಾಡಿದ್ದು, ಹಣಕಾಸು ಮತ್ತು ಹೊಣೆಗಾರಿಕೆಯ ನಿರ್ಣಾಯಕ ನಿಯತಾಂಕಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದೆ. ಶ್ರೇಯಾಂಕದಲ್ಲಿ ಹಣಕಾಸು ಗರಿಷ್ಠ ಪ್ರಾಮುಖ್ಯ ಹೊಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎರಡು ವರ್ಷಗಳಲ್ಲಿ ಗ್ರಾಮೀಣಾಭಿವೃದ್ಧಿಗಾಗಿ ಹತ್ತು ಹಲವು ನೂತನ ಯೋಜನೆಗಳನ್ನು ಪರಿಚಯಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಮುಖವಾಗಿ ಕೂಸಿನ ಮನೆ, ಅರಿವು ಕೇಂದ್ರ, ಘನತ್ಯಾಜ್ಯ ನಿರ್ವಹಣೆ, ರಾಜೀವ್‌ಗಾಂಧಿ ಪಂಚಾಯತ್‌ರಾಜ್‌ ಫೆಲೋಶಿಪ್‌, ಪ್ರಗತಿಪಥ, ಕಲ್ಯಾಣಪಥ, ಹೊಂಬೆಳಕು ಮುಂತಾದವುಗಳು ಗ್ರಾಮೀಣರ ಬದುಕಿಗೆ ಸಹಕಾರಿಯಾಗಿದೆ. ಇದರ ಜೊತೆಗೆ ನರೇಗಾ, ಗ್ರಾಮೀಣ ಕುಡಿಯುವ ನೀರು ಮುಂತಾದ ಕಾರ್ಯಕ್ರಮಗಳನ್ನು ಜನರಿಗೆ ಉಪಯೋಗವಾಗುವಂತೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular