HomeLatest Newsಪ್ರಯಾಣಿಕರಿಗೆ ಗುಡ್ ನ್ಯೂಸ್: ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ

ಪ್ರಯಾಣಿಕರಿಗೆ ಗುಡ್ ನ್ಯೂಸ್: ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ

ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಸಲು ನೈರುತ್ಯ ರೈಲ್ವೇ ನಿರ್ಧಾರ ಕೈಗೊಂಡಿದೆ.

ಕೆಎಸ್ಆರ್ ಬೆಂಗಳೂರು –ಮಿರಜ್- ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ ಗೆ(16589/16590) ತಾತ್ಕಾಲಿಕವಾಗಿ ಜುಲೈ 2 ರವರೆಗೆ ಒಂದು ಹೆಚ್ಚುವರಿ ಎಸಿ ಪ್ರಥಮ ದರ್ಜೆ ಕೋಚ್ ಅಳವಡಿಸಲಾಗುವುದು.

ಬೆಂಗಳೂರು -ಬೆಳಗಾವಿ -ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ ಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಎಸಿ ಪ್ರಥಮ ದರ್ಜೆ ಕೋಚ್ ಅಳವಡಿಸಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಶವಂತಪುರ –ಚಂಡೀಗಢ- ಯಶವಂತಪುರ ಎಕ್ಸ್ ಪ್ರೆಸ್ ಗೆ(22685/22686) ತಾತ್ಕಾಲಿಕವಾಗಿ ಜುಲೈ 5ರವರೆಗೆ ಒಂದು ಹೆಚ್ಚುವರಿ ತ್ರೀ ಟೈಯರ್ ಕೋಚ್ ಅಳವಡಿಸಲಾಗುವುದು.

ಕೆಎಸ್ಆರ್ ಬೆಂಗಳೂರು –ಹುಬ್ಬಳ್ಳಿ- ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್ ಪ್ರೆಸ್ ಗೆ(12079/ 12080) ತಾತ್ಕಾಲಿಕವಾಗಿ ಜುಲೈ 1ರವರೆಗೆ ಒಂದು ಎರಡನೇ ದರ್ಜೆಯ ಚೇರ್ ಕಾರ್ ಕೋಚ್ ಹೆಚ್ಚುವರಿಯಾಗಿ ಅಳವಡಿಸಲಾಗುವುದು.

ಶಿವಮೊಗ್ಗ -ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್ ಪ್ರೆಸ್ ಗೆ(12089/12099) ತಾತ್ಕಾಲಿಕವಾಗಿ ಜುಲೈ 2 ರವರೆಗೆ ಒಂದು ಹೆಚ್ಚುವರಿ 2ನೇ ದರ್ಜೆಯ ಚೇರ್ ಕಾರ್ ಕೋಚ್ ಅಳವಡಿಸಲಾಗುವುದು ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular