ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾದ ವಾಹನವನ್ನು ರಸ್ತೆಯಿಂದ ತೆಗೆಯುತ್ತಿದ್ದ ವೇಳೆ ಟ್ರಕ್ ಹರಿದು ಆರು ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ 8.30 ರ ಸುಮಾರಿಗೆ ಗೆವ್ರೈನ ದೀಪಕ್ ಅಟ್ಕರೆ ಚಲಾಯಿಸುತ್ತಿದ್ದ ಕಾರ್ ಇಲ್ಲಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಗಡಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-52 ರ ವಿಭಜಕವನ್ನು ದಾಟಿದೆ.
ಕೆಲವು ಸ್ಥಳೀಯರು ಕಾರ್ ಅನ್ನು ತೆಗೆಯುವಲ್ಲಿ ನಿರತರಾಗಿದ್ದಾಗ ರಾತ್ರಿ 11.30 ರ ಸುಮಾರಿಗೆ ಟ್ರಕ್ ಅವರ ಮೇಲೆ ಹರಿದಿದೆ. ಟ್ರಕ್ ಡಿಕ್ಕಿ ಹೊಡೆದ ರಭಸಕ್ಕೆ 6 ಜನ ಸಾವನ್ನಪ್ಪಿದ್ದಾರೆ. ಒಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಬಾಲು ಅಟ್ಕರೆ, ಭಾಗವತ್ ಪರಲ್ಕರ್, ಸಚಿನ್ ನನ್ನವ್ರೆ, ಮನೋಜ್ ಕರಂಡೆ, ಕೃಷ್ಣ ಜಾಧವ್ ಮತ್ತು ದೀಪಕ್ ಸುರಯ್ಯ ಎಂದು ಗುರುತಿಸಲಾಗಿದೆ. ಎಲ್ಲರೂ ಬೀಡ್‌ನ ಜಿಯೋರೈ ನಿವಾಸಿಗಳು. ಪರಾರಿಯಾಗಿರುವ ಟ್ರಕ್ ಚಾಲಕನನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.