ಕಾರವಾರ: ಕರಾವಳಿ ಜಿಲ್ಲೆಗಳಲ್ಲಿ ವರುಣಾರ್ಭಟ ಜೋರಾಗಿದ್ದು, ಹಲವು ಅನಾಹುತಗಳು ಸಂಭವಿಸುತ್ತಿವೆ. ಒಂದೆಡೆ ಮಳೆಯ ಅಬ್ಬರ ಮತ್ತೊಂದೆಡೆ ಗುಡ್ದ ಕುಸಿಯುವ ಭೀತಿ ಎದುರಾಗಿದೆ. ಈ ನಡುವೆ ಕಾಲು ಜಾರಿ ಕಾಳಿನದಿಗೆ ಬಿದ್ದು ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸ್ಂಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಂತೋಷ್ ರಾಯ್ಕರ್ (35) ನಾಪತ್ತೆಯಾಗಿರುವ ಯುವಕ.
ರಾತ್ರಿ ಸುಂಕೇರಿ ಗ್ರಾಮದ ಸೇತುವೆ ಬಳಿ ಯುವಕ ಕಾಲು ಜಾರಿ ಕಾಳಿ ನದಿಗೆ ಬಿದ್ದಿದ್ದಾನೆ. ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಯುವಕನಿಗಾಗಿ ಶೋಧ ನಡೆಸಿದ್ದಾರೆ. ರಬ್ಬರ್ ಬೋಟ್ ಸಹಾಯದಿಂದ ನದಿಯ ಹಿನ್ನೀರಿನಲ್ಲಿ ಹುಡುಕಾಟ ನಡೆಸಲಾಗುತ್ತಿದೆ.
ಕಾರವಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.