ವಿಜಯಪುರ: ಮದುವೆ ಮನೆಯಲ್ಲಿ ಡಾನ್ಸ್ ಮಾಡುತ್ತಿದ್ದಾಗಲೇ ಯುವಕನೊಬ್ಬ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಸಂಬಂಧಿಕರ ಮದುವೆ ಸಮಾರಂಭದಲ್ಲಿ ಮೆರವಣಿಗೆ ವೇಳೆ ಭರ್ಜರಿ ಸ್ಟೆಪ್ ಹಾಕುತ್ತಾ ಕುಣಿದು ಕುಪ್ಪಳಿಸುಉತ್ತಿದ್ದ ಯುವಕ ಏಕಾಏಕಿ ಕುಸಿದು ಬಿದ್ದಿದ್ದು, ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಿಜಯಪುರದ ಚಪ್ಪರಬಂಧ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
28 ವರ್ಷದ ಮೊಹಮ್ಮದ್ ಪೈಗಂಬರ್ ಗಂಗನಹಳ್ಳಿ ಮೃತ ಯುವಕ. ಡಾನ್ಸ್ ಮಾಡುತ್ತಿದ್ದಗಲೇ ಎಲ್ಲರ ಎದುರೇ ಯುವಕ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.