ಚಿತ್ರದುರ್ಗ: ನಗರಸಭೆಯ ಶೇ.5 ಹಾಗೂ ಶೇ.7.25 ರ ಅನುದಾನದಡಿ 2025-26ನೇ ಸಾಲಿಗೆ ದಿವ್ಯಾಂಗ ಅನಿಲ ರಹಿತ ಕುಟುಂಬಗಳಿಗೆ ಅನಿಲ ಸಂಪರ್ಕ ಪಡೆಯಲು ಸಹಾಯ ಧನ ಒದಗಿಸಲು ಹಿರಿಯೂರು ನಗರಸಭೆಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ 1 ಸಿಲಿಂಡರ್ ಹಾಗೂ 1 ಸ್ಟೌವ್ ಅನ್ನು ಮಾರ್ಗಸೂಚಿಗಳ ಅನುಸಾರ ನೀಡಲಾಗುವುದು. ಶೇ.5 ಹಾಗೂ ಶೇ.7.25 ರ ಅನುದಾನದಡಿ ಬಡ ವಿದ್ಯಾರ್ಥಿಗಳಿಗೆ ವಿಶೇಷ ನೆರವು ಸಹ ನೀಡಲಾಗತ್ತದೆ. ನಗರಸಭೆ ವ್ಯಾಪ್ತಿಯ ದಿವ್ಯಾಂಗ ಹಾಗೂ ಬಡ ವಿದ್ಯಾರ್ಥಿಗಳು ಜೂನ್ 10 ರ ಒಳಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಪೌರಾಯುಕ್ತ ಎ.ವಾಸೀಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.