HomeLatest Newsವರುಣಾರ್ಭಟಕ್ಕೆ ಸಾಯಿ ಲೇಔಟ್ ಮುಳುಗಡೆ; ನಿವಾಸಿಗಳಿಗೆ ಟ್ರ್ಯಾಕ್ಟರ್, ಜೆಸಿಬಿ ಮೂಲಕ ಆಹಾರ ಪೂರೈಕೆ

ವರುಣಾರ್ಭಟಕ್ಕೆ ಸಾಯಿ ಲೇಔಟ್ ಮುಳುಗಡೆ; ನಿವಾಸಿಗಳಿಗೆ ಟ್ರ್ಯಾಕ್ಟರ್, ಜೆಸಿಬಿ ಮೂಲಕ ಆಹಾರ ಪೂರೈಕೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ವರುಣಾರ್ಭಟಕ್ಕೆ ತತ್ತರಗೊಂಡಿದೆ. ಬಹುತೇಕ ಬಡಾವಣೆಗಳು, ತಗ್ಗು ಪ್ರದೇಶ ಸಂಪೂರ್ಣ ಜಲಾವೃತಗೊಂಡಿದ್ದು, ಕಳೆದ ಮೂರು ದಿನಗಳಿಂದ ಜನಜೀವನ ಸಂಪೂರ್ನ ಅಸ್ತವ್ಯಸ್ಥಗೊಂಡಿದೆ.

ಬೆಂಗಳೂರಿನ ಸಾಯಿ ಲೇಔಟ್ ನಲ್ಲಿ ಮಳೆಯ ಅಬ್ಬರಕ್ಕೆ ಪ್ರವಾಹ ಪರಿಸ್ಥಿತಿಯುಂಟಾಗಿದೆ. ಅಲ್ಲಿನ ಅಪಾರ್ಟ್ ಮೆಂಟ್, ಮನೆಗಳಿಗೆ ನೀರು ನುಗ್ಗಿದ್ದು, ಸಂಪೂರ್ಣ ಜಲಾವೃತಗೊಂಡಿದೆ.

ರಾಜಕಾಲುವೆಯ ನೀರು ಸಾಯಿ ಲೇಔಟ್ ಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಈಗಾಗಲೇ ಅಲ್ಲಿನ ಪಾರ್ಟ್ ಮೆಂಟ್ ನ ಮೊದಲ ಹಾಗೂ ಎರಡನೇ ಮಹಡಿಯಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಉಳಿದವರ ಸ್ಥಿತಿ ಗಂಭೀರವಾಗಿದೆ. ಮನೆಯಿಂದ ಹೊರಬರಲೂ ಸಾಧ್ಯವಾಗದ ಮಟ್ಟಿಗೆ ಅಪಾರ್ಟ್ ಮೆಂತ್ ಬೇಸ್ ಮೆಂಟ್ ನಲ್ಲಿ ಎದೆಯಮಟ್ಟಕ್ಕೆ ನೀರು ನಿಂತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದೆಡೆ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಜಲಾವೃತಗೊಂಡಿರುವ ರಾಜಕಾಲುವೆ ನೀರಿನಿಂದಾಗಿ ನಿವಾಸಿಗಳು ಅನಾರೋಗ್ಯಕ್ಕೀಡಾಗಿದ್ದಾರೆ. ಊಟ-ಆಹಾರವಿಲ್ಲದೇ ಪರದಾಟ ನಡೆಸಿದ್ದಾರೆ. ಇಂದು ಬೆಳಿಗ್ಗೆ ಅಪಾರ್ಟ್ ಮೆಂಟ್ ನ ಮೇಲ್ಭಾಗದಲ್ಲಿ ವಾಸವಾಗಿರುವ ನಿವಾಸಿಗಳಿಗೆ ಟ್ರ್ಯಾಕ್ಟರ್, ಜೆಸಿಬಿ ಮೂಲಕ ಆಹಾರ ಪೂರೈಕೆ ಮಾಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular