ರಾಂಚಿ: ಕ್ಷುಲ್ಲಕ ಕಾರಣಕ್ಕೆ ಅಕ್ಕ-ಪಕ್ಕದ ಮನೆಯವರ ನಡುವೆ ಆರಂಭವಾದ ಜಗಳ ಮಹಿಳೆಯೊಬ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಜಾರ್ಖಂಡ್ ನ ಕಬ್ರಿಸ್ತಾನ್ ರಸ್ತೆಯ ಕೆವತ್ಪಾದಲ್ಲಿ ಕಸದ ವಿಚಾರವಾಗಿ ಯುವಕನೊಬ್ಬ ಪಕ್ಕದ ಮನೆಯವರೊಂದಿಗೆ ಜಗಳವಾಡಿದ್ದಾನೆ. ನೆರೆಮನೆಯ ಮಹಿಳೆ ಹಾಗೂ ಆಕೆಯ ಪತಿ, ಯುವಕನ ನಡುವೆ ವಾಗ್ವಾದ ತಾರಕಕ್ಕೇರಿದೆ. ಕೋಪದ ಬರದಲ್ಲಿ ಯುವಕ ಕತ್ತಿಯಿಂದ ಮಹಿಳೆಯ ಶಿರಚ್ಛೇದ ಮಾಡಿದ್ದಾನೆ. ಮಹಿಳೆ ವಿಮಾಲಾದೇವಿ ಹಾಗೂ ಆಕೆಯ ಪತಿ ಮೇಲೂ ಹಲ್ಲೆ ನಡೆಸಿದ್ದಾನೆ. ಮಹಿಳೆಯ ಪತಿ ಮನೋಜ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ಬಳಿಕ ಆರೋಪಿ ಯುವಕ ತಾನೇ ಪೊಲೀಸರ ಮುಂದೆ ಶರಣಾಗಿದ್ದಾನೆ. ಬಂಧಿತ ಆರೋಪಿಯನ್ನು ಫುಲ್ಚಂದ್ ಸಾಹ್ ಎಂದು ಗುರುತಿಸಲಾಗಿದೆ. ಹೊಸದಾಗಿ ನಿರ್ಮಾಣಗೊಂಡಿದ್ದ ಪಿಸಿಸಿ ರಸ್ತೆಯಲ್ಲಿ ಕಸೆ ಎಸೆದ ವಿಚರವಾಗಿ ಮಹಿಳೆ ಹಾಗೂ ಯುವಕ ಆಗಾಗ ಜಗಳವಾಡುತ್ತಿದ್ದರು. ಈಗ ಜಗಳ ವಿಪರೀತಕ್ಕೆ ತಲುಪಿ ಕೊಲೆಯಲ್ಲಿ ಅಂತ್ಯವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.