ಧಾರವಾಡ : ಜಿಲ್ಲಾ ಕೃಷಿ ತರಬೇತಿಕೇಂದ್ರ ಧಾರವಾಡದಲ್ಲಿ ಕೇಂದ್ರ ಪುರಸ್ಕøತ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೃಷಿಗೆ ಸಂಬಂಧಪಟ್ಟ ವಿವಿಧ ವಿಷಯಗಳ ಕುರಿತು ಮೇ 13 ರಿಂದ 30 ರವರೆಗೆ ವಿವಿಧ ಹಂತಗಳಲ್ಲಿ ನುರಿತ ವಿಷಯ ತಜ್ಞರಿಂದ ಧಾರವಾಡ ಜಿಲ್ಲೆಯ ರೈತರಿಗೆ ತರಬೇತಿಗಳನ್ನು ಏರ್ಪಡಿಸಲಾಗಿದೆ.
ಮೇ 13, 2025 ರಂದು ಮುಂಗಾರು ಹಂಗಾಮಿನ ಆಧುನಿಕ ಬೇಸಾಯ ಕ್ರಮಗಳು ಹಾಗೂ ಕಳೆಗಳ ನಿರ್ವಹಣೆ, ಮೇ 15 ರಿಂದ ಮೇ 17, 2025 ರವರೆಗೆ ಸಮಗ್ರ ಕೃಷಿ ಪದ್ಧತಿ ಮತ್ತು ಮುಂಗಾರು ಬೆಳೆಗಳ ವಿವಿಧ ತಾಂತ್ರಿಕತೆ, ಹಾಗೂ ಮೇ 20 ರಿಂದ ಮೇ 22 ಮತ್ತು ಜೂನ್ 18 ರಿಂದ ಜೂನ್ 20, 2025 ರವರೆಗೆ ಸಾವಯವ ಕೃಷಿ, ನೈಸರ್ಗಿಕ ಕೃಷಿ ತರಬೇತಿ, ಮೇ 29 ರಂದು ಮಣ್ಣು ಮಾದರಿ ಸಂಗ್ರಹಣೆ ಮತ್ತು ವಿಷ್ಲೇಶಣೆ, ಜೂನ್ 10 ರಂದು ಸಾಮಾಜಿಕ ಭದ್ರತಾಯೋಜನೆ ಹಾಗೂ ಬ್ಯಾಂಕುಗಳಿಂದ ದೊರೆಯುವ ಕೃಷಿ ಸಾಲ ಸೌಲಭ್ಯ, ಜೂನ್ 13 ರಂದು ಜಾನುವಾರ ಸಾಕಾಣಿಕೆಯಲ್ಲಿ ಹಸಿರು ಮೇವಿನ ಪಾತ್ರ, ಜುಲೈ 8 ರಂದು ಸಮಗ್ರ ಕೃಷಿ ಪದ್ಧತಿ ಅಳವಡಿಸಿ ಯಶಸ್ಸು ಕಂಡ ರೈತರ ಅನುಭವ ಹಂಚಿಕೆ, ಜುಲೈ 11 ರಂದು ವಿವಿಧ ಕೃಷಿ ಉಪಕರಣಗಳ ಉಪಯೋಗ ಮತ್ತು ನಿರ್ವಹಣೆ, ಜುಲೈ 16 ರಂದು ಮುಂಗಾರು ಬೆಳೆಗಳ ಕೀಟ ಮತ್ತು ರೋಗ ಹತೋಟಿ ಕ್ರಮ, ಜುಲೈ 18 ರಂದು ಕೃಷಿ ಆಧಾರಿತ ಉತ್ಪನ್ನಗಳಿಂದ ರೈತರಿಗೆ ಆದಾಯ ಉತ್ಪನ್ನ ಚಟುವಟಿಕೆ, ಜುಲೈ 30 ರಂದು ಸಿರಿಧಾನ್ಯಗಳ ಮಹತ್ವ ಹಾಗೂ ಮೌಲ್ಯವರ್ಧನೆ ರೈತರ ಸಾಂಸ್ಥಿಕ ತರಬೇತಿ ಹಾಗೂ ಜೂನ್ 4 ರಿಂದ ಜೂನ್ 6 ಮತ್ತು ಜುಲೈ 3 ರಿಂದ ಜುಲೈ 05, 2025 ರವರೆಗೆ ಕೃಷಿ ಬೆಳೆಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಕುರಿತು, ಮತ್ತು ಜೂನ್ 25 ರಿಂದ ಜೂನ್ 27, 2025 ರವರೆಗೆ ಮತ್ತು ಜುಲೈ 22 ರಿಂದ ಜುಲೈ 24, 2025 ರವರೆಗೆ ಹೈನುಗಾರಿಕೆ ಒಂದು ಲಾಭದಾಯಿಕೆ ಉದ್ಯಮ ವಿಷಯ ಕುರಿತು ರೈತರಿಗೆ ಸಾಂಸ್ಥಿಕ ತರಬೇತಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0836-2978374, 9902133054 ಮತ್ತು 8277931382 ಗಳಿಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಕೋರಲಾಗಿದೆ.