HomeLatest Newsರೈತರಿಗೆ ಗುಡ್ ನ್ಯೂಸ್: 16 ವರ್ಷದ ನಂತರ ವಾಡಿಕೆಗಿಂತ ಮೊದಲೇ ಮೇ 27ರಂದು ಕೇರಳಕ್ಕೆ ‘ಮಾನ್ಸೂನ್’...

ರೈತರಿಗೆ ಗುಡ್ ನ್ಯೂಸ್: 16 ವರ್ಷದ ನಂತರ ವಾಡಿಕೆಗಿಂತ ಮೊದಲೇ ಮೇ 27ರಂದು ಕೇರಳಕ್ಕೆ ‘ಮಾನ್ಸೂನ್’ ಪ್ರವೇಶ ಸಾಧ್ಯತೆ

ನವದೆಹಲಿ: ಕೇರಳಕ್ಕೆ ನೈರುತ್ಯ ಮಾನ್ಸೂನ್ ಮಳೆ ಮೇ 27ರಂದು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಾಡಿಕೆಯಂತೆ ಜೂನ್ 1ರಂದು ಕೇರಳಕ್ಕೆ ಮಾನ್ಸೂನ್ ಮಳೆ ಪ್ರವೇಶಿಸಲಿದೆ. ಆದರೆ, ಈ ಬಾರಿ 5 ದಿನ ಮೊದಲೇ ಮುಂಗಾರು ಆಗಮನವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ 2009ರಲ್ಲಿ ಮೇ 23ರಂದು ಮಳೆ ಪ್ರಾರಂಭವಾಗಿದ್ದು, ಈ ವರ್ಷ ನಿರೀಕ್ಷೆಯಂತೆ ಮೇ 27 ರಂದು ಕೇರಳಕ್ಕೆ ಮಾನ್ಸೂನ್ ಆಗಮಿಸಲಿದೆ. 16 ವರ್ಷದ ನಂತರ ಮೊದಲ ಬಾರಿಗೆ ಭಾರತದ ಮುಖ್ಯ ಭೂಭಾಗದಲ್ಲಿ ಮುಂಗಾರು ಮಾರುತಗಳು ಬೇಗನೆ ಪ್ರವೇಶಿಸಲಿವೆ. ಭಾರತದಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular