BREAKING: ಕದನ ವಿರಾಮ ಉಲ್ಲಂಘಿಸಿ ಪಾಕ್ ಡ್ರೋನ್ ದಾಳಿ: ಜಮ್ಮು, ಶ್ರೀನಗರದಲ್ಲಿ ಬ್ಲಾಕ್ ಔಟ್

ಶ್ರೀನಗರ: ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಮತ್ತೆ ಗುಂಡಿನ ದಾಳಿ ನಡೆಸಿದೆ. ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ 12ಕ್ಕೂ ಹೆಚ್ಚು ಬಾರಿ ಸ್ಪೋಟದ ಸದ್ದು ಕೇಳಿದ್ದು, ಜಮ್ಮುವಿನಲ್ಲಿ ಸಂಪೂರ್ಣ ಬ್ಲಾಕ್ ಔಟ್ ಮಾಡಲಾಗಿದೆ.

ಕಾಶ್ಮೀರ, ಗುಜರಾತ್, ರಾಜಸ್ಥಾನ, ಪಂಜಾಬ್ ನಲ್ಲಿ ಪಾಕಿಸ್ತಾನ ಡ್ರೋನ್ ದಾಳಿಗೆ ಯತ್ನಿಸಿದೆ.

ಭಾರತೀಯ ಸೇನಾ ನೆಲೆಗಳನ್ನೇ ಗುರಿಯಾಗಿಸಿಕೊಂಡು ಪಾಕಿಸ್ತಾನದಿಂದ ದಾಳಿ ನಡೆಸಲಾಗಿದ್ದು, ಶ್ರೀನಗರದತ್ತ ಪಾಕಿಸ್ತಾನದ 50 ಡ್ರೋನ್ ಗಳು ನುಗ್ಗಿ ಬಂದಿವೆ.

ಶ್ರೀನಗರದಲ್ಲಿ ದಾಳಿ, ಸ್ಪೋಟದ ಸದ್ದಿನ ಬಗ್ಗೆ ಸಿಎಂ ಒಮರ್ ಅಬ್ದುಲ್ಲಾ ಮಾಹಿತಿ ಹಂಚಿಕೊಂಡಿದ್ದು, ಇದು ಯಾವುದೇ ಕದನ ವಿರಾಮವಲ್ಲ. ಮತ್ತೆ ಸ್ಪೋಟ, ಗುಂಡಿನ ಸದ್ದು ಕೇಳಿಬರುತ್ತಿದೆ ಎಂದು ತಿಳಿಸಿದ್ದಾರೆ. ಶ್ರೀನಗರದ ಮಧ್ಯಭಾಗದಲ್ಲಿರುವ ವಾಯು ರಕ್ಷಣಾ ಘಟಕಗಳು ಇದೀಗಷ್ಟೇ ತೆರೆದಿವೆ. ಈ ನಡುವೆ ಕದನ ವಿರಾಮಕ್ಕೆ ಏನಾಯಿತು? ಶ್ರೀನಗರದಾದ್ಯಂತ ಸ್ಫೋಟಗಳು ಕೇಳಿಬಂದಿವೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read