ಬೆಂಗಳೂರು: ಕೆಪಿಎಸ್ ಸಿ ಪರೀಕ್ಷೆ ಒಂದಲ್ಲ ಒಮ್ದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಕೆಪಿಎಸ್ ಸಿ ಮೇನ್ಸ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪ ಕೇಳಿಬಂದಿದೆ.
ಪರೀಕ್ಷೆಗೂ ಮುನ್ನವೇ ಕೆಪಿಎಸ್ ಸಿ ಪರೀಕ್ಷೆಯ ಪ್ರಬಂಧ ಬರವಣಿಗೆ ಪ್ರಶ್ನೆ ಪತ್ರಿಕೆ ಬಂಡಲ್ ಓಪನ್ ಆಗಿದೆ. ಬೆಂಗಳೂರಿನ ಕಸ್ತೂರಬಾ ನಗರ ಬಿಬಿಎಂಪಿ ಕಾಲೇಜಿನಲ್ಲಿ ನಡೆದ ಪರೀಕ್ಷೆ ರೂಮ್ ನಂ.4 ಹಾಗೂ 6ರಲ್ಲಿ ಪ್ರಶ್ನೆ ಪತ್ರಿಕೆಯ ಒಂದು ಬಂಡಲ್ ಓಪನ್ ಆಗಿದೆ.
ಎರಡು ಕವರ್ ಗಳ ಪೈಕಿ ಒಂದು ಕವರ್ ಓಪನ್ ಆಗಿದೆ ಎಂದು ಪರೀಕ್ಷಾ ಕೇಂದ್ರದ ಸಿಬ್ಬಂದಿ ಮತ್ತು ಅಭ್ಯರ್ಥಿಗಳ ನಡುವೆ ಗಲಾಟೆ ನಡೆದಿದೆ. ಪರೀಕ್ಷಾ ಸಿಬ್ಬಂದಿಗಳ ಕಾರ್ಯವೈಖರಿಗೆ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.