BREAKING : ‘ಸುಹಾಸ್ ಶೆಟ್ಟಿ’ ಹತ್ಯೆ ಬೆನ್ನಲ್ಲೇ ಮತ್ತಿಬ್ಬರು ಹಿಂದೂ ಕಾರ್ಯಕರ್ತರಿಗೆ ಕೊಲೆ ಬೆದರಿಕೆ : ಟಾರ್ಗೆಟ್ ಪೋಸ್ಟ್ ವೈರಲ್.!

ಬೆಂಗಳೂರು : ‘ಸುಹಾಸ್ ಶೆಟ್ಟಿ’ ಹತ್ಯೆ ಬೆನ್ನಲ್ಲೇ ಮತ್ತಿಬ್ಬರು ಹಿಂದೂ ಕಾರ್ಯಕರ್ತರಿಗೆ ಕೊಲೆ ಬೆದರಿಕೆ ಬಂದಿದ್ದು, ಟಾರ್ಗೆಟ್ ಪೋಸ್ಟ್ ವೈರಲ್ ಆಗಿದೆ.

ಹೌದು, ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಮಂಗಳೂರಿನಲ್ಲಿ ಹಿಂದೂ ಮುಖಂಡನಿಗೆ ಕೊಲೆ ಬೆದರಿಕೆ ಹಾಕಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.ಮೇ 5 ರಂದು ರಾತ್ರಿ 9:30 ಕ್ಕೆ ಹಿಂದೂ ಮುಖಂಡ ಭರತ್ ಕಮ್ಹಲ್ ಹತ್ಯೆ ಮಾಡುವುದಾಗಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸುಹಾಸ್ ಶೆಟ್ಟಿ ಫೋಟೋಗೆ ರೈಟ್ ಚಿಹ್ನೆ ಹಾಕಿ ಪೋಸ್ಟ್ ಹಂಚಿಕೊಂಡು ವಿಕೃತಿ ಮೆರೆದಿದ್ದಾರೆ. ಹಾಗೂ, ವಿಶ್ವ ಹಿಂದೂ ಪರಿಷತ್ ನ ಶರತ್ ಪಂಪ್ ವೆಲ್ ಗೆ ಕೂಡ ಕೊಲೆ ಬೆದರಿಕೆ ಬಂದಿದೆ. ಮುಂದಿನ ಟಾರ್ಗೆಟ್ ಲಿಸ್ಟ್ ನಲ್ಲಿ ವಿಶ್ವ ಹಿಂದೂ ಪರಿಷತ್ ನ ಶರತ್ ಪಂಪ್ ವೆಲ್ ಹಾಗೂ ಭಜರಂಗದಳದ ಭರತ್ ಕುಮ್ಡೇಲ್ ಎಂದು ಹೆಸರುಗಳಿರುವ ಪೋಸ್ಟ್ ವೈರಲ್ ಆಗುತ್ತಿವೆ.

ಮಂಗಳೂರಿನ ಬಜ್ಪೆಯಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ . ರೌಡಿಶೀಟರ್, ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ನಂತರ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ನಡೆದ ಚಾಕು ಇರಿತ ಪ್ರಕರಣಗಳಿಗೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಉಳ್ಳಾಲ, ಕಂಕನಾಡಿ, ಕಾವೂರು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಇರಿತ ಮತ್ತು ಹಲ್ಲೆ ಘಟನೆಗಳಿಗೆ ಸಂಬಂಧಿಸಿದಂತೆ ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read