ನವದೆಹಲಿ: ಪ್ರಧಾನಿ ಮೋದಿ ಗಾಯಬ್ ಟ್ವೀಟ್ ಫೋಟೋವನ್ನು ಕಾಂಗ್ರೆಸ್ ಡಿಲಿಟ್ ಮಾಡಿದೆ. ತಲೆ ಇಲ್ಲದ ಮೋದಿ ಫೋಟೋ ಹಾಕಿ ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಪೋಸ್ಟ್ ಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಡಿಲಿಟ್ ಮಾಡಲಾಗಿದೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಪಕ್ಷದ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಸುಪ್ರಿಯಾ ಅವರ ವಿರುದ್ಧ ಪಕ್ಷದ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದರು.
ತಲೆ ಇಲ್ಲದ ಮೋದಿ ಫೋಟೋ ಹಾಕಿ ಕಾಂಗ್ರೆಸ್ ಪಹಲ್ಗಾಮ್ ದಾಳಿ ಘಟನೆ ಬಗ್ಗೆ ವ್ಯಂಗ್ಯವಾಡಿತ್ತು. ಮೋದಿ ಗಾಯಬ್ ಎಂದು ಕಾಂಗ್ರೆಸ್ ವ್ಯಂಗ್ಯ ಮಾಡಿದ್ದು, ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಪೋಸ್ಟ್ ಡಿಲಿಟ್ ಮಾಡಲಾಗಿದೆ.
ತಲೆ ಇಲ್ಲದ ಮೋದಿ ಫೋಟೋ ಹಾಕಿ ಗಾಯಬ್ ಎಂದು ಕಾಂಗ್ರೆಸ್ ಪಕ್ಷ ಪೋಸ್ಟ್ ಮಾಡಿ ಹೊಸ ವಿವಾದ ಹುಟ್ಟು ಹಾಕಿತ್ತು. ಪಾಕಿಸ್ತಾನದ ಸಚಿವ ಕೂಡ ತುಂಟ ಕಾಂಗ್ರೆಸ್ ಹ್ಯಾಷ್ ಟ್ಯಾಗ್ ನೊಂದಿಗೆ ಪೋಸ್ಟರ್ ಹಂಚಿಕೊಂಡಿದ್ದು, ಭಾರಿ ವಿವಾದಕ್ಕೆ ಕಾರಣವಾಗಿತ್ತು. ಪಾಕಿಸ್ತಾನದಿಂದ ಕಾಂಗ್ರೆಸ್ ಪಕ್ಷ ಆದೇಶ ಪಡೆದು ಈ ರೀತಿ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನಲೆಯಲ್ಲಿ ಪೋಸ್ಟ್ ಡಿಲಿಟ್ ಮಾಡಲಾಗಿದೆ.