ತುಮಕೂರು: ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ವ್ಯಕ್ತಿ ಹಾಗೂ ಎರದು ಹಸುಗಳು ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕಲ್ಲಯ್ಯನಪಾಳ್ಯದಲ್ಲಿ ನಡೆದಿದೆ.
ಯೋಗೀಶ್ (50) ಮೃತ ದುರ್ದೈವಿ. ಯೋಗೀಶ್ ಎಂದಿನಂತೆ ಇಂದು ಬೆಳಿಗ್ಗೆ ಹಸುಗಳನ್ನು ಮೇಯಿಸಲು ಕರೆದೊಯ್ದಿದ್ದರು. ಈ ವೇಳೆ ತೋಟದ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಹೈನುಗಾರಿಕೆಯಿಂದ ಯೋಗೀಶ್ ಜೀವನ ನಡೆಸುತ್ತಿದ್ದರು.
ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.