ಕೋಲಾರ : ನೀರು ಬೆರೆಸದೇ 5 ಬಾಟಲ್ ಮದ್ಯ ಕುಡಿಯುವುದಾಗಿ ಚಾಲೆಂಜ್ ಹಾಕಿದ ಯುವಕ ಮೃತಪಟ್ಟ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರದ ನುಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಯುವಕ ಕಾರ್ತಿಕ್ ದಾರುಣವಾಗಿ ಮೃತಪಟ್ಟಿದ್ದಾನೆ. 10 ದಿನಗಳಷ್ಟೇ ಈತನ ಪತ್ನಿ ಮಗುವಿಗೆ ಜನ್ಮ ನೀಡಿದ್ದಳು.
ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯ ಕಾರ್ತಿಕ್ ತನ್ನ ಸ್ನೇಹಿತರ ಜೊತೆ ಚಾಲೆಂಜ್ ಹಾಕಿ ಬೆಟ್ಸ್ ಕಟ್ಟಿದ್ದನು. ನಾನು ನೀರು ಬೆರೆಸದೇ 5 ಬಾಟಲಿ ಎಣ್ಣೆ ಹೊಡೆಯುತ್ತೇನೆ ಎಂದು ಚಾಲೆಂಜ್ ಹಾಕಿದ್ದನು. ಮಾತಿನಂತೆ 5 ಬಾಟಲ್ ಸೇವಿಸಿದ ಕಾರ್ತಿಕ್ ಅಸ್ವಸ್ಥಗೊಂಡಿದ್ದನು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ. ನುಂಗಲಿ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್ ಸ್ನೇಹಿತರ ವಿರುದ್ಧ ದೂರು ದಾಖಲಾಗಿದೆ.
You Might Also Like
TAGGED:ಮದ್ಯ