ಚಾಮರಾಜನಗರ : ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ದುರ್ಮರಣಕ್ಕೀಡಾದ ಘಟನೆ ಚಾಮರಾಜನಗರದ ಯಳಂದೂರು ತಾಲೂಕಿನ ಗುಂಬಳ್ಳಿಯಲ್ಲಿ ನಡೆದಿದೆ.
ಮೃತರನ್ನು ಅಭಯ್ ಗೌಡ , ವೃಷಭೇಂದ್ರ ಎಂದು ಗುರುತಿಸಲಾಗಿದೆ. ಸದ್ಯ ವೃಷಭೇಂದ್ರ ಶವ ಪತ್ತೆಯಾಗಿದ್ದು, ಅಭಯ್ ಗೌಡ ಶವವಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ಮೇಲೆ ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸದ್ಯ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳದಲ್ಲಿ ದೌಡಾಯಿಸಿದ್ದಾರೆ.
TAGGED:ಚಾಮರಾಜನಗರ