BREAKING: ಪ್ರತಿಭಟನಾನಿರತ ಭಾರತೀಯರ ಕತ್ತು ಸೀಳುವ ಸನ್ನೆ ಮಾಡಿದ ಪಾಕಿಸ್ತಾನ ಅಧಿಕಾರಿ ಉದ್ಧಟತನ | WATCH VIDEO

ಲಂಡನ್: ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಗೆ ಖಂಡನೆ ವ್ಯಕ್ತವಾಗಿದ್ದು, ದಾಳಿಯನ್ನು ವಿರೋಧಿಸಿ ಲಂಡನ್ ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಮುಂದೆ ಭಾರತೀಯರು ಧರಣಿ ನಡೆಸಿದ್ದಾರೆ.

ಈ ವೇಳೆ ಪಾಕಿಸ್ತಾನದ ಅಧಿಕಾರಿ ತೈಮೂರ್ ರೆಹಾತ್ ಉದ್ಧಟತನ ತೋರಿಸಿದ್ದಾನೆ. ಪಾಕಿಸ್ತಾನ ಸೇನೆಯ ಡಿಫೆನ್ಸ್ ಅಟ್ಯಾಚ್ ಕರ್ನಲ್ ತೈಮೂರ್ ಪ್ರತಿಭಟನಾನಿರತ ಭಾರತೀಯರಿಗೆ ಆಕ್ರಮಣಕಾರಿ ಸನ್ನೆ ತೋರಿಸಿದ್ದಾನೆ.

ಸಾರ್ವಜನಿಕವಾಗಿ ಪ್ರತಿಭಟನಾಕಾರರ ಕತ್ತು ಕತ್ತರಿಸುವ ಸನ್ನೆ ಮಾಡಿದ್ದಾನೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಕರಾಳ ಮುಖವಾಡ ಮತ್ತೊಮ್ಮೆ ಬಯಲಾಗಿದೆ.

ಯುಕೆಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್ ಸದಸ್ಯನೂ ಆಗಿರುವ ತೈಮೂರ್ ಲಂಡನ್ ನಲ್ಲಿ ಪಹಲ್ಗಾಮ್ ದಾಳಿ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಈ ರೀತಿ ವರ್ತನೆ ತೋರಿಸಿದ್ದು, ವಿಡಿಯೋ ವೈರಲ್ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read