ಬೆಂಗಳೂರು: ಇಸ್ರೋ ಮಾಜಿ ಅಧ್ಯಕ್ಷ ಕೃಷ್ಣಸ್ವಾಮಿ ಕಸ್ತೂರಿರಂಗನ್ (82) ಅವರು ಶುಕ್ರವಾರ ನಿಧನರಾದರು.
ಡಾ.ಕೆ.ಕಸ್ತೂರಿರಂಗನ್ ಅವರು ಭಾರತೀಯ ಬಾಹ್ಯಾಕಾಶ ನಿಗಮದ ಅಧ್ಯಕ್ಷರಾಗಿ 9 ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮವನ್ನು ಅದ್ಭುತವಾಗಿ ಮುನ್ನಡೆಸಿದ್ದರು. ಬೆಂಗಳೂರಿನ ಅವರ ನಿವಾಸದಲ್ಲಿ ಕಸ್ತೂರಿ ರಂಗನ್ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ.
ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್ ಯಾರು..?
ಕೃಷ್ಣಸ್ವಾಮಿ ಕಸ್ತೂರಿರಂಗನ್ (ಕನ್ನಡ:ಕೃಷ್ಣಸ್ವಾಮಿ ಕಸ್ತೂರಿರಂಗನ್) ಅವರು ಕರ್ನಾಟಕದ ಬೆಂಗಳೂರಿನಲ್ಲಿ ನೆಲಸಿರುವ ಬಾಹ್ಯಾಕಾಶ ವಿಜ್ಞಾನಿಯಾಗಿದ್ದು, ಇವರು ೨೦೦೩ ರವರೆಗೆ ೯ ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ನೇತೃತ್ವ ವಹಿಸಿದ್ದರು. ಇವರು ಭಾರತೀಯ ಸಂಸತ್ತಿನ ಮೇಲ್ಮನೆ (ರಾಜ್ಯ ಸಭೆ,೨೦೦೩-೨೦೦೯ಯ) ಸದಸ್ಯರಾಗಿದ್ದರು. ಇವರು ಇದೀಗ ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯರಾಗಿದ್ದಾರೆ[೧] [೨].ಹಾಗೆಯೇ ಇವರು ಏಪ್ರಿಲ್ ೨೦೦೪ ರಿಂದ ಬೆಂಗಳೂರಿನಲ್ಲಿರುವ ಸುಧಾರಿತ ಶಿಕ್ಷಣದ ರಾಷ್ಟ್ರೀಯ ಸಂಸ್ಥೆ. ಇವರು ಭಾರತ ಸರ್ಕಾರದಿಂದ ಮೂರು ನಾಗರಿಕ ಪ್ರಶಸ್ತಿಯ ಸ್ವೀಕೃತರಾಗಿದ್ದಾರೆ: ಪದ್ಮಶ್ರೀ (೧೯೮೨), ಪದ್ಮಭೂಷಣ (೧೯೯೨) ಮತ್ತು ಪದ್ಮ ವಿಭೂಷಣ (೨೦೦೦)
ಡಾ. ಕಸ್ತೂರಿರಂಗನ್ ಅವರು ೨೦೦೩ ರ ಆಗಸ್ಟ್ ೨೭ ರಂದು ತಮ್ಮ ಅಧಿಕಾರ ಮುಕ್ತಾಯಗೊಳ್ಳುವ ಮುನ್ನ ೯ ವರ್ಷಗಳಿಗೂ ಹೆಚ್ಚು ಕಾಲ ಇಸ್ರೋ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮತ್ತು ಬಾಹ್ಯಾಕಾಶ ಇಲಾಖೆಯಲ್ಲಿ ಭಾರತ ಸರ್ಕಾರಕ್ಕೆ ಕಾರ್ಯದರ್ಶಿಯಾಗಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ನಿರ್ದೇಶನಕ್ಕೆ ಜವಾಬ್ದಾರಿಯಾಗಿದ್ದರು. ಈ ಹಿಂದೆ ಅವರು ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾಗಿದ್ದರು ಮತ್ತು ಆಧುನಿಕ ಯುಗದ ಬಾಹ್ಯಾಕಾಶ ನೌಕೆ, ಭಾರತೀಯ ರಾಷ್ಟ್ರೀಯ ಉಪಗ್ರಹ (ಇನ್ಸಾಟ್-೨) ಮತ್ತು ಭಾರತೀಯ ದೂರ ಗ್ರಾಹಿಉಪಗ್ರಹಗಳು (ಐಆರ್ಎಸ್-೧ಎ ಮತ್ತು ೧ಬಿ) ಜೊತೆಗೆ ವೈಜ್ಞಾನಿಕ ಉಪಗ್ರಹಗಳ ಅಭಿವೃದ್ದಿಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು. ಇವರು ಭಾರತದ ಮೊದಲ ಎರಡು ಪ್ರಾಯೋಗಿಕ ಭೂ ವೀಕ್ಷಣೆಯ ಉಪಗ್ರಹಗಳಾದ ಭಾಸ್ಕರ-I ಮತ್ತು II ರ ಯೋಜನಾ ನಿರ್ದೇಶಕರಾಗಿದ್ದರು.