ವಿಜಯನಗರ: ಮದುವೆಗೆ ನಿರಾಕರಿಸಿದ್ದಕ್ಕೆ ಯುವಕನೊಬ್ಬ ಯುವತಿಗೆ ಚಾಕು ಇರಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ಭಾರತಿ ಶಾವಿ (25) ಹಲ್ಲೆಗೊಳಗಾದ ಯುವತಿ. ವಿಜಯಭಾಸ್ಕರ್ (26) ಯುವತಿಗೆ ಚಾಕು ಇರಿದ ಯುವಕ. ಕೆಲ ವರ್ಷಗಳ ಹಿಂದೆ ಭಾರತಿ ಹಾಗೂ ವಿಜಯ ಭಾಸ್ಕರ್ ಫೇಸ್ ಬುಕ್ ನಲ್ಲಿ ಪರಿಚಿಯವಾಗಿದ್ದಾರೆ. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿದೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕೆಲ ದಿನಗಳಿಂದ ಯುವತಿ ಭಾರತಿ ಯುವಕನಿಂದ ಅಂತರ ಕಾಯ್ದುಕೊಂಡಿದ್ದಾಳೆ.
ಅಲ್ಲದೇ ಪ್ರೀತಿ ವಿಚಾರವನ್ನೂ ನಿರಾಕರಿಸಿದ್ದಾಳೆ. ವಿಜಯ ಭಾಸ್ಕರ್ ತನ್ನನ್ನು ಮದುವೆಯಾಗುವಂತೆ ಯುವತಿಗೆ ಕೇಳಿದ್ದನಂತೆ. ಆದರೆ ಯುವತಿ ಆತನನ್ನು ಮದುವೆಯಾಗಲು ಒಪ್ಪಿಲ್ಲ. ಇದರಿಂದ ಆಂಧ್ರದ ನಂದ್ಯಾಲ ಗ್ರಾಮದಿಂದ ಹೊಸಪೇಟೆಗೆ ಆಗಮಿಸಿದ ಯುವಕ, ನಗರಸಭೆ ಎದುರು ಯುವತಿಗೆ ಚಾಕು ಇರಿದಿದ್ದಾನೆ.
ಯುವತಿಯ ಹೊಟ್ಟೆ, ಕೈಗಳಿಗೆ ಚಾಕುವಿನಿಂದ ಇರಿದಿದ್ದು, ಗಂಭೀರವಾಗಿ ಹಲ್ಲೆಗೊಳಗಾದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸಪೇಟೆ ಪಟ್ಟಣ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.