ಒರ್ಲ್ಯಾಂಡೊ : ಒರ್ಲ್ಯಾಂಡೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್ ಲೈನ್ಸ್ ವಿಮಾನದ ಎಂಜಿನ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ದುರಂತವೊಂದು ತಪ್ಪಿದೆ.
ಫ್ಲೈಟ್ 1213 ವಿಮಾನವು ನಿನ್ನೆ ಬೆಳಿಗ್ಗೆ 11: 15 ರ ಸುಮಾರಿಗೆ ಗೇಟ್ನಿಂದ ಹೊರಡಲು ತಯಾರಿ ನಡೆಸುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಏರ್ಬಸ್ ಎ 330 ವಿಮಾನವು 282 ಪ್ರಯಾಣಿಕರು, 10 ವಿಮಾನ ಸಿಬ್ಬಂದಿ ಮತ್ತು ಇಬ್ಬರು ಪೈಲಟ್ಗಳೊಂದಿಗೆ ಹಾರ್ಟ್ಸ್ಫೀಲ್ಡ್-ಜಾಕ್ಸನ್ ಅಟ್ಲಾಂಟಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ಬೆಂಕಿ ಕಾಣಿಸಿಕೊಂಡ ಕೂಡಲೇ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಸ್ಥಳಾಂತರಿಸಲಾಗಿದೆ.
ಒಂದು ಎಂಜಿನ್ ನ ಟೈಲ್ ಪೈಪ್ ನಿಂದ ಬೆಂಕಿ ಹೊರಬರುತ್ತಿರುವುದು ಕಂಡುಬಂದಿದೆ. ವಿಮಾನ ಸಿಬ್ಬಂದಿ ತಕ್ಷಣ ಎಲ್ಲರಿಗೂ ಖಾಲಿ ಮಾಡುವಂತೆ ಸೂಚನೆ ನೀಡಿದರು. ಪ್ರಯಾಣಿಕರು ತುರ್ತು ಸ್ಲೈಡ್ ಗಳ ಮೂಲಕ ವಿಮಾನದಿಂದ ಹೊರ ಬಂದರು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
❗️WATCH close up of Delta plane on fire
— Moh Musthafa Hussain (@musthafaaa) April 21, 2025
Flames and black smoke coming out of engine
RT pic.twitter.com/AvYLHhDXmK