ಬೀಡ್: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಜೋಗಾಯಿ ತಾಲೂಕಿನ ಸಂಗಾವ್ ಗ್ರಾಮದಲ್ಲಿ ನಡೆದ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ದೇವಸ್ಥಾನದ ಧ್ವನಿವರ್ಧಕದ ಗದ್ದಲದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಕ್ಕೆ ಯುವ ವಕೀಲೆಯೊಬ್ಬರನ್ನು ಗ್ರಾಮದ ಸರ್ಪಂಚ್ ಮತ್ತು ಅವರ ಬೆಂಬಲಿಗರು ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಂಬಜೋಗಾಯಿ ಸೆಷನ್ಸ್ ನ್ಯಾಯಾಲಯದಲ್ಲಿ ವಕೀಲರಾಗಿರುವ ದ್ನ್ಯಾನೇಶ್ವರಿ ಅಂಜನ್ ಎಂಬುವರು ಏಪ್ರಿಲ್ 14 ರಂದು ಈ ಆಘಾತಕಾರಿ ಹಲ್ಲೆಗೆ ಒಳಗಾಗಿದ್ದಾರೆ.
ಮರಾಠಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ದ್ನ್ಯಾನೇಶ್ವರಿ ಅಂಜನ್, ಗ್ರಾಮದ ಸರ್ಪಂಚ್ ಮತ್ತು ಅವರ ಬೆಂಬಲಿಗರು ಪೈಪುಗಳಿಂದ ತಮ್ಮನ್ನು ನಿರ್ದಯವಾಗಿ ಥಳಿಸಿದ್ದಾರೆ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರಗಳಲ್ಲಿ, ದ್ನ್ಯಾನೇಶ್ವರಿ ಅವರ ಬೆನ್ನಿನ ಮೇಲೆ ಹಲ್ಲೆಯ ಗುರುತುಗಳು ಕಪ್ಪು ಮತ್ತು ನೀಲಿ ಬಣ್ಣಕ್ಕೆ ತಿರುಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಘಟನೆ ಬೆಳಕಿಗೆ ಬಂದ ನಂತರ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮೈಗ್ರೇನ್ ಮತ್ತು ಬೆನ್ನುನೋವಿನಿಂದ ಬಳಲುತ್ತಿರುವ ದ್ನ್ಯಾನೇಶ್ವರಿ ಅವರು ಸಂದರ್ಶನದಲ್ಲಿ ಮಾತನಾಡಲು ಸಹ ತೀವ್ರ ತೊಂದರೆ ಅನುಭವಿಸುತ್ತಿದ್ದರು. ತಮ್ಮ ಮನೆಯ ಬಳಿ ಗ್ರಾಮ ಪಂಚಾಯಿತಿಯು ಮೂರು ಹಿಟ್ಟಿನ ಗಿರಣಿಗಳನ್ನು ಪ್ರಾರಂಭಿಸಿದ್ದರಿಂದ ತಮ್ಮ ಮೈಗ್ರೇನ್ ಸಮಸ್ಯೆ ಹೆಚ್ಚಾಗಿದೆ ಎಂದು ಅವರು ದೂರಿದ್ದಾರೆ.
ಘಟನೆಯ ಕುರಿತು ವಿವರಿಸಿದ ಅವರು, 2023ರ ಫೆಬ್ರವರಿ 23ರಂದು ಗ್ರಾಮದ ದೇವಸ್ಥಾನದಲ್ಲಿ ಧ್ವನಿವ ಜೋರಾಗಿತ್ತು ಮತ್ತು ಆ ಸಮಯದಲ್ಲಿ ತಾವು ಓದುತ್ತಿದ್ದು, ಜೋರಾದ ಶಬ್ದದಿಂದಾಗಿ ಓದಿನ ಕಡೆ ಗಮನಹರಿಸಲು ಸಾಧ್ಯವಾಗಲಿಲ್ಲ. ಆಗ ತಾವು ಸರ್ಪಂಚ್ ಅನಂತ್ ಅಂಜನ್ ಅವರಿಗೆ ಕರೆ ಮಾಡಿ ಶಬ್ದವನ್ನು ಕಡಿಮೆ ಮಾಡಲು ಕೇಳಿಕೊಂಡಿದ್ದಾರೆ.
ಆದರೆ ಎರಡು ಗಂಟೆಗಳ ನಂತರವೂ ಏನೂ ಆಗಲಿಲ್ಲ. ಮತ್ತೆ ಕರೆ ಮಾಡಿದಾಗ, ಸಿಬ್ಬಂದಿ ಕರೆ ಸ್ವೀಕರಿಸುತ್ತಿಲ್ಲ ಎಂದು ಸರ್ಪಂಚ್ ಹೇಳಿದರು. ಆದ್ದರಿಂದ ತಾವು ಸಂಬಂಧಪಟ್ಟ ಸಿಬ್ಬಂದಿಯ ಮನೆಗೆ ಹೋಗಿ ದೇವಸ್ಥಾನದ ಕಹಳೆ ಧ್ವನಿಯನ್ನು ಕಡಿಮೆ ಮಾಡಲು ಕೇಳಿಕೊಂಡಿದ್ದು, ಆದರೆ ತಾವು ಮಾಂಸಾಹಾರ ಸೇವಿಸಿದ್ದರಿಂದ ದೇವಸ್ಥಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಮತ್ತೆ ಸರ್ಪಂಚ್ಗೆ ಕರೆ ಮಾಡಿದಾಗ, ಅವರು ಪೊಲೀಸರಿಗೆ ದೂರು ನೀಡಲು ಹೇಳಿದಾಗ ಮೊದಲು ಗ್ರಾಮ ಅಭಿವೃದ್ಧಿ ಅಧಿಕಾರಿಗೆ ಕರೆ ಮಾಡಿದೆ. ಅವರು ನಾಳೆ ಬಂದಾಗ ಧ್ವನಿಯನ್ನು ಕಡಿಮೆ ಮಾಡುವುದಾಗಿ ಹೇಳಿದರು. ಬೆಳಿಗ್ಗೆಯವರೆಗೆ ಧ್ವನಿ ಮುಂದುವರಿದರೆ ಏನು ಮಾಡಬೇಕು ಎಂದು ಕೇಳಿದೆ. ತಡೆಯಲು ಸಾಧ್ಯವಾಗದಷ್ಟು ತೊಂದರೆಯಾಗಿದ್ದರಿಂದ ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿದೆ. ಪೊಲೀಸರು ಮಧ್ಯಪ್ರವೇಶಿಸಿ ಧ್ವನಿಯನ್ನು ಕಡಿಮೆ ಮಾಡಿಸಿದರು. ಮರುದಿನ ಸರ್ಪಂಚ್ ತಮ್ಮ ಬೆಂಬಲಿಗರೊಂದಿಗೆ ಮನೆಗೆ ಬಂದು ಪೋಷಕರ ಮೇಲೆ ಒತ್ತಡ ಹೇರಿದ್ದಲ್ಲದೇ ಈ ಘಟನೆಯ ನಂತರ, ಸರ್ಪಂಚ್ ಉದ್ದೇಶಪೂರ್ವಕವಾಗಿ ನಮ್ಮ ಮನೆಯ ಬಳಿ ಮೂರು ಹಿಟ್ಟಿನ ಗಿರಣಿಗಳನ್ನು ಪ್ರಾರಂಭಿಸಿದರು. ಈ ನಿರಂತರ ಶಬ್ದದಿಂದ ತೀವ್ರ ಮೈಗ್ರೇನ್ ಉಂಟಾಯಿತು. ಬೆನ್ನುನೋವು ಕೂಡ ಇದೆ ಎಂದು ದ್ನ್ಯಾನೇಶ್ವರಿ ಅಂಜನ್ ಆರೋಪಿಸಿದ್ದಾರೆ.
ಈ ಘಟನೆ ಏಪ್ರಿಲ್ 14 ರಂದು ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ, ದ್ನ್ಯಾನೇಶ್ವರಿ ಅಂಜನ್ಗೆ ಎಫ್ಐಆರ್ನ ಪ್ರತಿಯನ್ನು ನೀಡಿಲ್ಲ. ಈ ಕುರಿತು ಶರದ್ ಪವಾರ್ ಗುಂಪಿನ ನಾಯಕ ಜಿತೇಂದ್ರ ಅವ್ಹಾಡ್ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
बीड जिल्ह्यातील अंबाजोगाई येथे सत्र न्यायालयात वकीली करणाऱ्या एका महिलेला गावातील ध्वनीप्रदूषणाविरोधात कार्यालयीन तक्रार केल्याच्या कारणावरून सरपंच आणि त्याच्या कार्यकर्त्यांनी शेतात नेऊन बेदम मारहाण केली. काठ्या आणि JCB पाइप वापरून झालेल्या हल्ल्यामुळे ती महिला बेशुद्ध पडली, आणि… pic.twitter.com/GudPki4yY9
— Hemant Ogale (@hemantogale) April 18, 2025
अंबाजोगाई सत्र न्यायालयात वकीली करणाऱ्या महिलेला सरपंच आणि त्याच्या कार्यकर्त्यांकडून शेतात रिंगण करून काठ्या आणि जे.सी.बी पाईपने जबर मारहाण करण्यात आली. पीडित महिलेने सांगितला अंगावर काटा आणणारा घटनाक्रम#बीड #अंबाजोगाई #मारहाण #वकीलमहिला pic.twitter.com/4KsAhknHp5
— Ganesh Pokale… (@P_Ganesh_07) April 18, 2025
अंबाजोगाई सत्र न्यायालयात वकीली करणार्या महिलेला सरपंच आणि त्याच्या कार्यकर्त्याकडुन शेतात रिंगण करून काठ्या आणि जे.सी.बी पाईपने जबर मारहाण करण्यात आली.
— स्पर्धा परीक्षा समन्वय समिती ,महाराष्ट्र राज्य (@Mpsc_Andolan) April 18, 2025
महिलेने गावातील ध्वनिप्रदूषणामुळे मायग्रेन चा त्रास होत असल्याने आवाज कमी करावा ,लाऊडस्पीकर लाऊ नयेत घरापुढील पिठाच्या… pic.twitter.com/LlSEpFcSit