ಬೆಂಗಳೂರು : ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ಕಲಬುರಗಿಯ ಕೆಸಿಟಿ ಕಾಲೇಜ್ ಕ್ಯಾಂಪಸ್ನಲ್ಲಿ ಇದೇ ಏಪ್ರಿಲ್ 16ನೇ ತಾರೀಖಿನಂದು ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
ಯುವ ಮಾನವ ಸಂಪನ್ಮೂಲವು ಕರ್ನಾಟಕಕ್ಕೆ “ಯುವ ನಿಧಿ” ಇದ್ದಂತೆ.ಸಾಮರ್ಥ್ಯ, ಪ್ರತಿಭೆ, ಕೌಶಲ್ಯಗಳನ್ನು ಹೊಂದಿರುವ ಯುವ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ಹಾಗೂ ಅವರಿಗೆ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಪ್ರಾಮಾಣಿಕ ಹೆಜ್ಜೆ ಇಡುತ್ತಿದೆ .
ಕಲಬುರಗಿಯ ಪ್ರತಿಭಾವಂತ ಯುವ ಸಮುದಾಯಕ್ಕೆ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ಕಲಬುರಗಿಯ ಕೆಸಿಟಿ ಕಾಲೇಜ್ ಕ್ಯಾಂಪಸ್ನಲ್ಲಿ ಇದೇ ಏಪ್ರಿಲ್ 16ನೇ ತಾರೀಖಿನಂದು ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
200ಕ್ಕೂ ಹೆಚ್ಚು ರಾಜ್ಯದ ಪ್ರತಿಷ್ಠಿತ ಕಂಪೆನಿಗಳು ಭಾಗಿಯಾಗುವ ಈ ಉದ್ಯೋಗ ಮೇಳದ ಪ್ರಯೋಜನವನ್ನು ಉದ್ಯೋಗಾಕಾಂಕ್ಷಿಗಳು ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳುವತ್ತ ಹೆಜ್ಜೆ ಇಡಬೇಕು.
ಯಾವುದೇ ವಿದ್ಯಾರ್ಹತೆ ಇದ್ದರೂ ಸಹ ಉದ್ಯೋಗ ಮೇಳದಲ್ಲಿ ಭಾಗಿಯಾಗಬಹುದು.
ಸ್ಕಿಲ್ ಕನೆಕ್ಟ್ ಪೋರ್ಟಲ್ (skillconnect. http://Kaushalkar.com) ಮೂಲಕ ನೋಂದಣಿ ಮಾಡಿಕೊಂಡು ತಮ್ಮ ಆಯ್ಕೆಯ ಕಂಪೆನಿಗಳ ಸಂದರ್ಶನದಲ್ಲಿ ಭಾಗಿಯಾಗಬಹುದು.
ಕಲಬುರಗಿಯ ಯುವ ಜನರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಈ ಉತ್ತಮ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಕಟಣೆ ಹೊರಡಿಸಿದೆ.
https://www.facebook.com/photo/?fbid=1210111017148039&set=a.534504314708716