HomeLatest NewsSHOCKING : ಕೋವಾದಲ್ಲೂ ಕಲಬೆರಕೆ ಅಂಶ ಪತ್ತೆ, ವಾಟರ್ ಬಾಟಲ್’ ಗಳಲ್ಲಿ ಶೇ.50 ರಷ್ಟು ಕೂಡ...

SHOCKING : ಕೋವಾದಲ್ಲೂ ಕಲಬೆರಕೆ ಅಂಶ ಪತ್ತೆ, ವಾಟರ್ ಬಾಟಲ್’ ಗಳಲ್ಲಿ ಶೇ.50 ರಷ್ಟು ಕೂಡ ಗುಣಮಟ್ಟವಿಲ್ಲ : ಆರೋಗ್ಯ ಇಲಾಖೆ ವರದಿ

ಬೆಂಗಳೂರು : ಪನ್ನೀರ್ ಬಳಿಕ ಕೋವಾದಲ್ಲೂ ಕಲಬೆರಕೆ ಅಂಶ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ವರದಿ ನೀಡಿದೆ.

ಸಿಹಿತಿಂಡಿಗಳಿಗೆ ಬಳಸುವ ಕೋವಾದಲ್ಲೂ ಕಲಬೆರಕೆಯಾಗಿದ್ದು, ಇದು ಅನ್ ಸೇಫ್ ಎಂದಿದೆ. ಕೋವಾದ ಕೆಲವು ಸ್ಯಾಂಪಲ್ಸ್ ಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಲ್ಯಾಬ್ ಗೆ ಕಳುಹಿಸಿದ್ದು, ಕೋವಾದಲ್ಲಿ ಕಲಬೆರಕೆ ಅಂಶವಿರುವುದು ಧೃಡವಾಗಿದೆ. ಕೋವಾ ತಯಾರಿಸಲು ಡಿಜರ್ಟೆಂಟ್, ಯೂರಿಯಾ ಬಳಸುತ್ತಿರುವುದು ಬಯಲಾಗಿದೆ.

ಅದೇ ರೀತಿ ವಾಟರ್ ಬಾಟಲ್ ಗಳಲ್ಲಿ ಶೇ.50 ರಷ್ಟು ಕೂಡ ಗುಣಮಟ್ಟವಿಲ್ಲ ಎಂದು ಆರೋಗ್ಯ ಇಲಾಖೆ ವರದಿ ನೀಡಿದೆ. ಈ ಸಂಬಂಧ ಸಚಿವ ದಿನೇಶ್ ಗುಂಡೂರಾವ್ ಇಂದು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular