HomeLatest NewsBREAKING: 3.5 ಕೆಜಿ ಚಿನ್ನ ದರೋಡೆ: ಕಾಂಗ್ರೆಸ್ ಮುಖಂಡ ಸೇರಿ ನಾಲ್ವರು ಅರೆಸ್ಟ್

BREAKING: 3.5 ಕೆಜಿ ಚಿನ್ನ ದರೋಡೆ: ಕಾಂಗ್ರೆಸ್ ಮುಖಂಡ ಸೇರಿ ನಾಲ್ವರು ಅರೆಸ್ಟ್

ದರೋಡೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡನನ್ನು ಆಂಧ್ರಪ್ರದೇಶದ ವಿಕೋಟ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೋಲಾರ ಜಿಲ್ಲೆ ಕೆಜಿಎಫ್ ನಗರಸಭೆಯ ಕಾಂಗ್ರೆಸ್ ಸದಸ್ಯ ಜಯಪಾಲ್ ನನ್ನು ಬಂಧಿಸಲಾಗಿದೆ. ಚಿನ್ನದ ವ್ಯಾಪಾರಿಯ ಕಾರ್ ಅಡ್ಡಗಟ್ಟಿ 3.5 ಕೆಜಿ ಚಿನ್ನವನ್ನು ಗ್ಯಾಂಗ್ ದೋಚಿತ್ತು. ಏಪ್ರಿಲ್ 2ರಂದು ನಾಯಕನೇರು ಸಮೀಪ ದರೋಡೆ ನಡೆಸಲಾಗಿತ್ತು.

ತಮಿಳುನಾಡಿನ ಚೆನ್ನೈನಿಂದ ಕೆಜಿಎಫ್ ಗೆ ವ್ಯಾಪಾರಿ ಚೇತನ್ ಜೈನ್ ಚಿನ್ನ ಸಾಗಿಸುತ್ತಿದ್ದರು. ಅವರ ಕಾರ್  ಅಡ್ಡಗಟ್ಟಿದ ಜಯಪಾಲ್ ಮತ್ತು ಸಂಗಡಿಗರು ದರೋಡೆ ನಡೆಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಜಿಎಫ್ ನಿವಾಸಿ ಜಯಪಾಲ್, ಕಾರ್ ಚಾಲಕ ಮುಕ್ರಂ ಪಾಷಾ, ತಮಿಳುನಾಡಿನ ಇಬ್ಬರು ಕಾರ್ ಅಡ್ಡಗಟ್ಟಿ ದರೋಡೆ ಮಾಡಿದ್ದರು. ಚಿನ್ನ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರ್ ವಶಕ್ಕೆ ಪಡೆದ ವಿಕೋಟ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶದ ವಿಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular