ಧಾರಾಶಿವ್: ಕಾಲೇಜಿನ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದ ವಿದ್ಯಾರ್ಥಿನಿ ಏಕಾಏಕಿ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಧಾರಾಶಿವ್ ನಲ್ಲಿ ನಡೆದಿದೆ.
ವರ್ಷಾ ಖರತ್ ಮೃತ ವಿದ್ಯಾರ್ಥಿನಿ. ಆರ್.ಜಿ.ಶಿಂಧೆ ಕಾಲೇಜಿನಲ್ಲಿ ವಿದ್ಯಾರ್ಥಿನಿ ವೇದಿಕೆ ಮೇಲೆ ನಗು ನಗುತ್ತಲೇ ಭಾಷಣ ಮಾಡುತ್ತಿದ್ದಳು. ಈ ವೇಳೆ ಕುಸಿದು ಬಿದ್ದ ವಿದ್ಯಾರ್ಥಿನಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ತಕ್ಷಣ ಆಕೆಯನ್ನು ಪರಾಂಡದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.
ವರ್ಷಾ 8 ವರ್ಷದವಳಿದ್ದಾಗ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಆದರೆ ಕಳೆದ 12 ವರ್ಷಗಳಿಂದ ಯಾವುದೇ ಆರೋಗ್ಯ ಸಮಸ್ಯೆ ಕೂಡ ಅವಳಿಗಿರಲಿಲ್ಲ. ಯಾವುದೇ ಔಷಧಿ ಕೂಡ ಸೇವಿಸುತ್ತಿರಲಿಲ್ಲ. ಈಗ ಕಾಲೇಜಿನಲ್ಲಿ ಭಷಣ ಮಾಡುತ್ತಿದ್ದ ವೇಳೆ ಹಠಾತ್ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.