HomeLatest NewsBREAKING NEWS: ಸುಡುಮಣ್ಣು ತಯಾರಿಸುವ ವೇಳೆ ದುರಂತ: ವೃದ್ಧ ಸಜೀವದಹನ

BREAKING NEWS: ಸುಡುಮಣ್ಣು ತಯಾರಿಸುವ ವೇಳೆ ದುರಂತ: ವೃದ್ಧ ಸಜೀವದಹನ

ಉಡುಪಿ: ಗದ್ದೆಯಲ್ಲಿ ಸುಡುಮಣ್ಣು ತಯಾರಿಸುವ ವೇಳೆ ಬೆಂಕಿ ಅವಘಡ ಸಂಭವಿಸಿ ವೃದ್ಧ ಸಜೀವದಹನವಾಗಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.

ಕಾಳಾವರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಡುಮಣ್ಣಿಗೆ ಹಚ್ಚಿದ್ದ ಬೆಂಕಿಯ ಕಿಡಿ ಒಣ ಹುಲಿಗೆ ತಗುಲಿ ಗದ್ದೆಯಲ್ಲಿದ್ದ ಒಣ ಹುಲ್ಲು ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆಗೆ ತಪ್ಪಿಸಿಕೊಂಡು ಹೊರಬರಲಾಗದೇ ವೃದ್ಧ ಬೆಂಕಿಗಾಹುತಿಯಾಗಿದ್ದಾರೆ.

ಮಹಾಲಿಂಗ ದೇವಾಡಿಗ (80) ಮೃತ ದುರ್ದೈವಿ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular